Tuesday, January 27, 2009

ನಿದ್ದೆಯಿಂದ ಎದ್ದವರು ಪ್ರಚಾರ ಕಂಠಕರು


ಮಂಗಳೂರಿನಲ್ಲಿ ಕಳೆದ ಶನಿವಾರ ನದೆದ ಪಬ್ ಮೇಲೆ ದಾಳಿ ಹಾಗು ಯುವತಿಯರ ಮೇಲೆ ಅಮಾನುಷ ಹಲ್ಲೆ ಪ್ರಕರಣ ಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಅಮಾನುಷ ಘಟನೆಯನ್ನು ಖಂಡಿಸಲೇ ಬೇಕಾಗಿದೆ. ಕುಡಿತ ,ಅಶ್ಲೀಲ ನೃತ್ಯ ನಮ್ಮ ಸಂಸ್ಕೃತಿ ಅಲ್ಲ ಎಂಬುದನ್ನು ಒಪ್ಪಿಕೊಳ್ಳೊಣ. ಆದರೆ ಹೆಣ್ಣನ್ನು ಅಮಾನುಷವಾಗಿ ಧಳಿಸುವುದು ನಮ್ಮ ಸಂಸ್ಕೃತಿ ಯೇ?. ಹೆಣ್ಣಿಗೆ ದೇವಿಯ ಸ್ಥಾನ ನೀಡಿರುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಈ ಹಲ್ಲೆಯನ್ನು ಕಠೋರವಾಗಿ ಖಂಡಿಸಲೇಬೇಕಾಗಿದೆ.

ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಹೆಸರನ್ನೆ ಇಟ್ಟು ಕೊಂಡಿರುವ ಸಂಘಟನೆಯ ಈ ವರ್ತನೆ ಶ್ರೀ ರಾಮ ಚಂದ್ರನಿಗೆ ಮಾಡಿರುವ ಅಪಚಾರವೇ ಸರಿ. ಈ ಹಲ್ಲೆಯನ್ನು ಸಂಘಟನೆಯ ಮುಖಂಡರು ಸಮರ್ಥಿಸುತ್ತಿರುವುದು ಅನಾರೋಗ್ಯಕರ. ಸಂಸ್ಕೃತಿಯ ರಕ್ಷಕರು ಎಂದು ಹೇಳಿಕೂಳ್ಳುತ್ತಿರುವವರು ಮೊದಲು ಭಾರತೀಯ ಸಂಸ್ಕೃತಿ ಬಗ್ಗೆ ತಿಳಿದು ಕೊಳ್ಳಬೇಕಾಗಿದೆ.
ಆದರೆ ಈ ನಡುವೆ ಈ ಘಟನೆಯ ಲಾಭ ಪಡೆಯಲು ರಾಜಕೀಯ ಪಕ್ಷಗಳು ಹವಣಿಸುತ್ತಿರುವ ರೀತಿ ಮಾತ್ರ ಭಯಾನಕ.

ಹೆಣ್ಣು ಈ ನಾಡಿನಲ್ಲಿ ಅಸುರಕ್ಷಿತ ಎಂದು ಬಿಂಬಿಸಹೊರಡಿರುವುದು ಖೇದಕರ. ವಿವಿಧ ಪಕ್ಷಗಳ ಮುಖಂಡರುಗಳು ಘಟನೆಗೆ ಉಪ್ಪು ಖಾರಾ ಹಾಕಿ ಹೇಳಿಕೆ ನೀಡುತ್ತಿದ್ದಾರೆ. ಈ ಪ್ರದೇಶದ ವಾಸ್ತವವನ್ನೇ ಆರಿಯದ ಈ ರಾಜಕೀಯ ಮುಖಂಡರು ಕೇವಲ ಘಟನೆ ಸಂಭವಿಸಿದಾಗ ಮಾತ್ರ ರಾಜಕೀಯ ಲಾಭ ಪಡೆಯಲು ದೌಡಾಯಿಸುತ್ತಾರೆ. ಸ್ಥಳೀಯ ನಾಯಕರೂ ಹೌದು ಬಸವಾ ಹೌದು ಎಂದು ತಲೆಯಾಡಿಸುತ್ತಾರೆ.

ಇದರಿಂದ ಕೆಲವು ಮಾಧ್ಯಮಗಳು ಹೊರತಾಗಿಲ್ಲ. ಅದರಲ್ಲೂ ಸೊ- ಕಾಲ್ಡ್ ರಾಷ್ಡ್ರೀಯ ಚಾನಲ್ ಗಳು ಮಂಗಳೂರನ್ನು ಬಿಂಬಿಸುತ್ತಿರುವ ರೀತಿ ಮಾತ್ರ ಭಯಾನಕವಾಗಿದ್ದು ಮುಂಬರುವ ದಿನಗಳಲ್ಲಿ ಮಂಗಳೂರಿಗೆ ಯಾರು ಕಾಲಿಡದ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ತುಳುವರಲ್ಲಿ ಮನೆ ಮಾಡಿದೆ. ಸಾ0ಸ್ಕೃತಿಕವಾಗಿ ಇಡಿ ವಿಶ್ವಕ್ಕೆ ತೆರೆದುಕೊ0ಡಿದ್ದ ಈ ಮ0ಗಳೂರು ಇ0ದು ರಾಷ್ಡ್ರೀಯ ಚಾನೆಲ್ ಘಟನೆಗಳ ಅತಿರ0ಜಿತ ಪ್ರಚಾರದ ಫಲವಾಗಿ ಅಸ0ಸ್ಕೃತರ ನಾಡಾಗಿ ಬಿ0ಬಿತವಾಗಿದೆ. ಅತೀ ಕ್ರೂರ ತಾಲಿಬಾನಿಗಳ ನಾಡಾಗಿ ವಿಶ್ವಕ್ಕೆ ಪರಿಚಯಿಸಿದೆ.

ಮೊನ್ನೆ ನಡೆದ ಘಟನೆ ಖಂಡಿಸಿ ಮಹಿಳಾ ಸಂಘಟನೆಗಳು ಈಗ ಎಚ್ಚೆತ್ತು ಕೊಂಡಿವೆ. ಈ ಘಟನೆಯ ಮೂಲಕ ಪ್ರಚಾರ ಪಡೆಯಲು ಕೆಲವು ಮಹಿಳಾ ಮಣಿಯರು ಮು0ದಾಗಿದ್ದಾರೆ. ಉರಿಯುತ್ತಿರುವ ಬೆ0ಕಿಯಲ್ಲಿ ಬೇಳೆ ಬೇಯಿಸಿ ಕೊಳ್ಳಲು ಕೆಲವು ಸೊ-ಕಾಲ್ಡ್ ಮಹಿಳಾ ಪ್ರಗತಿ ಪರ ಮುಖ0ಡರು ಮು0ದಾಗಿರುವುದು ದುರಂತ.
ಈ ಮಹಿಳಾ ಪ್ರಗತಿಪರರಿಗೆ ಕೇಳ ಬಯಸುವ ಪ್ರಶ್ನೆ ಗಳು ....
  • ಇತ್ತಿಚಿನ ಕೆಲವು ದಿನ ಗಳಿ0ದ ಯುವತಿಯರ ಮೇಲೆ ಹಲವಾರು ಹಲ್ಲೆಗಳು ನಡೆದ್ದಿದ್ದು ಆ ಸಮಯದಲ್ಲಿ ಈ ಮಹಿಳಾ ಮಣಿಗಳು ಎಲ್ಲಿ ಭೂಗತರಾಗಿದ್ದರು?
  • ವಾರದ ಹಿ0ದೆ ಮ0ಗಳೂರು ಹೊರವಲಯದ ಕಣ್ಣೂರು ಎ0ಬಲ್ಲಿ ಒಬ್ಬಳು ಯುವತಿ ಸೇರಿದ0ತೆ ಒಟ್ಟು ಮೂವರು ಹುಡುಗಿಯರು ಸ0ಶಯಾಸ್ಪದ ರೀತಿಯಲ್ಲಿ ಬೆ0ಕಿಗೆ ಆಹುತಿ ಯಾದಾಗ ಈ ಮಹಿಳಾ ಮಣಿಗಳು ಏಕೆ ದ್ವನಿ ಎತ್ತಿಲ್ಲ?
  • ಇತ್ತಿಚೆಗೆ ಸುರತ್ಕಲ್ ,ಕಾಟಿಪಳ್ಳ ದಲ್ಲಿ ಹಿ0ಸಾಚಾರ ಸಂಭವಿಸಿದಾಗ ಯುವಕರ ತ0ಡ ಮಹಿಳೆಯೊಬ್ಬಳು ಧರಿಸಿದ ವಸ್ತ್ರಹರಿದು ಹಲ್ಲೆ ನಡೆಸಿದಾಗ ಏಕೆ ಪ್ರತಿಭಟನೆಗೆ ಇಳಿಯಲಿಲ್ಲ?

ಈಗ ರಾಷ್ಟ್ರೀಯ ಚಾನಲ್ ಗಳಲ್ಲಿ ಪಬ್ ಹಲ್ಲೆ ಪ್ರಕರಣ ನಿರಂತರ ಪ್ರಸಾರ ವಾದಾಗ ಈ ಮಹಿಳಾ ಸ್ವಾತ0ತ್ರ್ಯ ರಕ್ಷರಿಗೆ ಪ್ರಚಾರ ಪಡೆಯಲು ಜ್ಞಾನೋದಯವಾಗಿದೆ ಅನಿಸುತ್ತಿದೆ. ಈಗ ಮಹಿಳೆಯರ ಸ್ವಾತ0ತ್ರ್ಯದ ಬಗ್ಗೆ ,ಹಕ್ಕಿನ ಬಗ್ಗೆ, ದೌರ್ಜನ್ಯದ ಬಗ್ಗೆ ದ್ವನಿ ಎತ್ತಲು ಮು0ದಾಗಿದ್ದಾರೆ. ಇನ್ನು ಈ ರಾಷ್ಟ್ರೀಯ ಚಾನಲ್ ಗಳು, ಇಷ್ಟು ದಿನಗಳವರೆಗೆ ಈ ರೀತಿಯ ಹಲ್ಲೆಗಳ ಬಗ್ಗೆ ವರದಿ ಯಾಗುತ್ತಿದ್ದಾಗ ಮ0ಗಳೂರಿನಾಚೆ ಯಾಕೆ ತಿರುಗಿ ನೋಡಿಲ್ಲ ಎ0ಬ ಪ್ರಶ್ನೆ ಕಾಡದಿರದು. ಇದೆಲ್ಲಾ ನೋಡಿದರೆ ರಾಜಕೀಯ ಹಿತಾಸಕ್ತಿಯ ಕುರುಹುಗಳು ಕಾಣಿಸುತ್ತಿವೆ.
ನಮ್ಮ ಹಿ0ದೂ ಸ0ಸ್ಕೃತಿಯ ಹರಿಕಾರರು ಎ0ದು ಹೇಳಿತಿರುಗುವ ಸ0ಘಟನೆಗಳು ಒ0ದು ವಿಷಯ ತಿಳಿಯಬೇಕು ಯಾವುದನ್ನು ಹೊಡೆದು ಬಡಿದು ಸರಿಪಡಿಸಲು ಸಾದ್ಯವಿಲ್ಲ. ನಮ್ಮ ಸ0ಸ್ಕೃತಿಯ ಬಗ್ಗೆ ತಿಳಿ ಹೇಳ ಬೇಕಾದರೆ ಪ್ರೀತಿಯಿ0ದ ಹೇಳಿ. ಶಾಲಾ ಕಾಲೇಜುಗಳಿಗೆ ತೆರಳಿ ದೇಶದ ಸ0ಸ್ಕೃತಿ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕು. ನಿಧಾನವಾಗಿಯಾದರೂ ಅದು ಪರಿಣಾಮ ಕಾರಿಯಾಗಲಿದೆ. ದೇಶದ ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ. ಆದರೆ ಅದಕ್ಕೆ ಹಿ0ಸಾಚಾರವೇ ಮಾರ್ಗೋಪಾಯವಲ್ಲ. ನಮ್ಮ ದೃಷ್ಟಿಯಲ್ಲಿ ಸರಿ ಎ0ದೆನಿಸಿದ್ದೆಲ್ಲ ಎಲ್ಲರಿಗೂ ಸರಿ ಎನಿಸಬೇಕೆ0ದಿಲ್ಲ. ನಮಗೆ ತಪ್ಪು ಎನಿಸಿದ ಮಾತ್ರಕ್ಕೆ ಹಿ0ಸಾ ಮಾರ್ಗ ಸರಿಯೇ? ಇದನ್ನು ಸ0ಘಟನೆಗಳು ಯೋಚಿಸ ಬೇಕು. ಮೊದಲು ಸ0ಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಿ. ಅದನ್ನು ಸಹನೆ, ಪ್ರೀತಿ ಯಿ0ದ ಹೇಳಬಹುದಲ್ಲವೆ. ಪಾಶ್ಚಾತ್ಯ ಸ0ಸ್ಕೃತಿಯತ್ತ ವಾಲುತ್ತಿರವವರನ್ನು ಅಹಿಂಸಾ ಮಾರ್ಗದ ಮೂಲಕ ಅಡ್ಡಿಪಡಿಸಬಹುದಲ್ಲವೆ. ಅದನ್ನು ಬಿಟ್ಟು ಹಿ0ಸೆಯನ್ನು ಬೆ0ಬಲಿಸುವುದು ಎಷ್ಟು ಸರಿ ಎ0ಬುದನ್ನು ಯೋಚಿಸ ಬೇಕಾಗಿದೆ.
ಎಡಪ0ಥೀಯರು ತಮ್ಮನ್ನು ಲೆಫ್ಟೀಸ್ಟ್ ಎ0ದು ಹೇಳಿಕೊಳ್ಳುವ ತಾವು ಸ್ವತಹ ಕ0ಡುಕೊ0ಡ ತತ್ವ ಸಿದ್ದಾ0ತಗಳ ಗತ್ತಿನಿ0ದ ಇ0ತಹ ವಿಷಯ ಗಳಲ್ಲಿ ಉರಿಯುತ್ತಿರುವ ಬೆ0ಕಿಗೆ ತುಪ್ಪ ಸುರಿದು ಪ್ರಚಾರ ಗಿಟ್ಟಿಸುವ ಯತ್ನ ಕೈಬಿಡಬೇಕು. ತಮ್ಮ ವಯಕ್ತಿಕ ದ್ವೇಷ ವನ್ನು ಇ0ತಹ ಸ0ಕೀರ್ಣ ವಿಷಯಗಳಲ್ಲಿ ತೋರಿಸದೇ ಸಮಾಜದ ಜವಾಬ್ದಾರಿ ನಾಗರಿಕರಂತೆ ವರ್ತಿಸುವುದು ಒಳಿತು. ಇಲ್ಲಿ ಲೆಫ್ಟೀಸ್ಟ್ ತತ್ವಗಳಿಗೆ ಜೋತು ಬಿದ್ದು ತಮ್ಮ ಎಡಪಂಥೀಯ ಯೋಚನೆಗಳನ್ನು ಓದುಗರಿಗೆ ಉಣಬಡಿಸುವ ಪತ್ರಕರ್ತರೂ ಆಲೋಚಿಸಬೇಕು. ಸಮಾಜದ ಹಿತವನ್ನು ದೃಷ್ಟಿಯಲ್ಲಿಟ್ಟು ಮಾಧ್ಯಮಗಳು ಕಾರ್ಯನಿರ್ವಹಿಸಬೇಕೆ ಹೊರತು ತಮ್ಮ ಬ್ರೇಕಿ0ಗ್ ಸುದ್ದಿಗಳಿಗಾಗಿ ಅಥವಾ ತಮ್ಮ ಎಡಪಂಥೀಯ ವೈರುತ್ಯ ನಿಲುವುಗಳ ಪ್ರಚಾರಕ್ಕಾಗಿ ಅಲ್ಲ .ಇದು ಮಾದ್ಯಮಗಳ ಬೆಳವಣಿಗೆಗೂ ಒಳಿತು ಅಂತೆಯೇ ಸಮಾಜದ ಸ್ವಾಸ್ಥ್ಯಕ್ಕೂ.

ಈ ನಡುವೆ ಕೋಮು ಸೌಹಾರ್ದ ವೇದಿಕೆ ಎ0ದು ಹೆಸರಿಟ್ಟು ಕೊಂಡ ಸ0ಘಟನೆ ಕೋಮುಗಳ ನಡುವೆ ಸೌಹಾರ್ದ ನೆಲೆಸುವ ನಿಟ್ಟಿನಲ್ಲಿ ಶ್ರಮಿಸ ಬೇಕೆ ಹೊರತು ಅವುಗಳ ನಡುವೆ ವೈಮನಸಲ್ಲ.

ಮೇರಾ ಭಾರತ್ ಮಹಾನ್.

7 comments:

Anonymous said...

>>ಈ ಮಹಿಳಾ ಪ್ರಗತಿಪರರಿಗೆ ಕೇಳ ಬಯಸುವ ಪ್ರಶ್ನೆ ಗಳು ....

ಈ ಪ್ರಶ್ನೆಗಳನ್ನು ನೀವು ಕೇಳಬೇಕಾಗಿರುವುದು ಮಹಿಳಾ ಪ್ರಗತಿಪರರನ್ನಲ್ಲ. ಕಾನೂನು ಪರಿಪಾಲಕರನ್ನು. ಅವರೆಲ್ಲಿದ್ದರು? ನೀವು ಅವರನ್ನೇಕೆ ಪ್ರಶ್ನಿಸುತ್ತಿಲ್ಲ?

ಸಮಾಜದ ಬಗ್ಗೆ ನಿಮಗೆ ಅಷ್ಟೊಂದು ಕಳಕಳಿ ಇದ್ದರೆ, ನಡೆಯುವ ಅನ್ಯಾಯಗಳನ್ನು ಪ್ರಶ್ನಿಸುವವರ ರಾಜಕೀಯ ಹಿತಾಸಕ್ತಿಯ ಮೇಲೆ ಅಷ್ಟೊಂದು ಅನುಮಾನಗಳಿದ್ದರೆ, ನೀವೇ ಯಾಕೆ ಅನ್ಯಾಯಗಳ ವಿರುದ್ಧ ಹೋರಾಡಬಾರದು?

ಬರೆಯುವುದು ಅದಕ್ಕಿಂತ ಸುಲಭ ಎಂದೇ?

Anonymous said...

Please write ur name anonymous...

try to understand neramatu

--Ranjit

Mediapepper said...

ಅನಾನಿಮಸ್,
ಮೊದಲಾಗಿ ನೇರನುಡಿಗೆ ಸ್ವಾಗತ...
ಅನ್ಯಾಯದ ವಿರುದ್ಧ ಹೋರಾಡುವ ಆಸೆ ಇದೆ, ನಿಮ್ಮಲ್ಲಿ ಯೋಗ್ಯವಾದ ವಿಧಾನ ಇದ್ದಲ್ಲಿ ತಿಳಿಸಿ. ಮಹಿಳಾ ಹೋರಾಟಗಾರರು, ರಾಜಕಾರಣಿಗಳು, ಮಾನವಹಕ್ಕು ಹೋರಾಟಗಾರರೊಂದಿಗೆ ಹೋರಾಡುವುದೇ ಕಾನೂನು ಪರಿಪಾಲಕರ ಕೆಲಸವಾಗಿ ಬಿಟ್ಟಿದ್ದರಿಂದ ಅವರಿಗೆ ಕಾನೂನು ಪರಿಪಾಲನೆಗೆ ಸಮಯವೆಲ್ಲಿದೆ?
ಹೌದು ಬರೆಯುವುದು ಸುಲಭ, ಬರೆಯುವ ಮೂಲಕ, ದೃಶ್ಯಗಳ ಮೂಲಕ ಭಯೋತ್ಪಾದನೆಯಲ್ಲಿ ತೊಡಗಿರುವವರಿಗೆ ನಮ್ಮದೂ ಅದೇ ವಿಧಾನದ ಉತ್ತರ :)

Anonymous said...

>>ಅನ್ಯಾಯದ ವಿರುದ್ಧ ಹೋರಾಡುವ ಆಸೆ ಇದೆ, ನಿಮ್ಮಲ್ಲಿ ಯೋಗ್ಯವಾದ ವಿಧಾನ ಇದ್ದಲ್ಲಿ ತಿಳಿಸಿ.

ಮೊದಲನೆಯದಾಗಿ, ’ಅನ್ಯಾಯ’ವನ್ನು define ಮಾಡಬೇಕು, ಯಾವುದನ್ನು ಅನ್ಯಾಯ ಎಂದು ಕರೆಯುತ್ತೀರಿ?

ಎರಡನೆಯದಾಗಿ, ಯಾವ ಕ್ಷೇತ್ರದಲ್ಲಿ ಆಗುವ ಅನ್ಯಾಯದ ವಿರುದ್ಧ ಹೋರಾಡಬಯಸುತ್ತೀರಿ ಎಂದು ನಿರ್ಧರಿಸಬೇಕು. ಉದಾ: ಮಹಿಳೆಯರ ವಿರುದ್ಧ ಆಗುವ ಅನ್ಯಾಯ, ಮಾಧ್ಯಮಗಳ ಬೇಜವಾಬ್ದಾರಿ ಬರವಣಿಗೆ ಇತ್ಯಾದಿ.

ಮೂರನೆಯದಾಗಿ, ನೀವು ಆಯ್ದುಕೊಂಡ ಕ್ಷೇತ್ರದಲ್ಲಾಗುವ ಅನ್ಯಾಯಗಳನ್ನು ಸರಿಪಡಿಸಲು ಈಗಾಗಲೇ ಸರ್ಕಾರ ನೇಮಿಸಿರುವ ಅಧಿಕಾರಿಗಳು, ಕಛೇರಿಗಳು ಹಾಗು ಅದಕ್ಕೆ ಸಂಬಂಧ ಪಟ್ಟ ಮಂತ್ರಿಗಳು ಯಾರೆಂದು ಗುರುತಿಸಿಕೊಳ್ಳಬೇಕು.

ನಾಲ್ಕನೆಯದಾಗಿ, ನಿಮಗೆ ಅನ್ಯಾಯ ಎನಿಸಬಹುದಾದ ಘಟನೆಗಳ ವಿವರಗಳನ್ನು ದಾಖಲಿಸಿಕೊಂಡು, ಅಲ್ಲಿ ನಡೆದಿರುವ ಅನ್ಯಾಯ ಏನೆಂದು ವಿವರಿಸಿ (ಇದಕ್ಕೆ ನಿಮ್ಮ ಜೊತೆ ಒಬ್ಬ ವಕೀಲರಿದ್ದರೆ, ಕಾನೂನು/ಸಂವಿಧಾನ ರೀತ್ಯಾ ಅಲ್ಲಿರುವ ಅನ್ಯಾಯ ಏನು ಎಂದು ವಿವರಿಸಲು ಸುಲಭವಾಗುತ್ತದೆ), ಅದಕ್ಕೆ ಸಂಬಂಧ ಪಟ್ಟ ಕಛೇರಿಗೆ ಖುದ್ದಾಗಿ ಅಥವಾ ಬರೆದು, ಅದಕ್ಕೆ ತಕ್ಕದಾದ ವಿಚಾರಣೆ/ಕ್ರಮವನ್ನು ನಿರೀಕ್ಷಿಸುವುದು. ಇದಕ್ಕೆ ಯಾರೂ ಉತ್ತರ ನೀಡದಿದ್ದರೆ, ನಿಮ್ಮ ದಾಖಲೆಗಳನ್ನು ಮೇಲಿನ ಅಧಿಕಾರಿಗಳಿಗೆ ಕಳಿಸಬೇಕು. ಇದ್ಯಾವುದರಿಂದಲೂ ಸಮಾಧಾನವಾಗದಿದ್ದಾಗ, ಆ ಅಧಿಕಾರಿಗಳ ಮೇಲೆ ಅಧಿಕೃತವಾಗಿ ದೂರು ದಾಖಲಿಸಬೇಕು. ಹಾಗೆಯೇ ನಿಮ್ಮ ಊರಿನ ಚುನಾಯಿತ ಪ್ರತಿನಿಧಿಯನ್ನು ಭೇಟಿಯಾಗಿ, ದಾಖಲೆಗಳ ಸಮೇತ ನೀವು ನ್ಯಾಯ ಬಯಸುತ್ತಿರುವ ಘಟನೆಯ ಬಗ್ಗೆ ಹಾಗೂ ಕರ್ತವ್ಯ ಪಾಲಿಸಲು ವಿಫಲರಾಗಿರುವ ಅಧಿಕಾರಿಗಳ ಬಗ್ಗೆ ತಿಳಿಸಬೇಕು.

ಯಾವ ಅಧಿಕಾರಿ/ಪ್ರತಿನಿಧಿಗಳೂ ಸಹಕಾರ ಕೊಡದಿದ್ದಾಗ, ನಿಮ್ಮನ್ನು ಬೆಂಬಲಿಸುವ ಜನರನ್ನು ಒಟ್ಟುಗೂಡಿಸಿ ನಿಮ್ಮ ಪ್ರಯತ್ನಗಳನ್ನು ಹೆಚ್ಚು ಬಲ ಪಡಿಸಬೇಕು. ಇದಕ್ಕೂ ಕಾನೂನುಬದ್ಧ ಮಾರ್ಗಗಳಿವೆ.

ಇದೆಲ್ಲಾ ಒಬ್ಬರೇ ಸಾಧಿಸುವ ಕೆಲಸವಲ್ಲ. ಹಲವಾರು ಜನರ ಸಹಕಾರ ಬೇಕಾಗುತ್ತದೆ.

ಇದನ್ನೆಲ್ಲಾ ಮಾಡಬಲ್ಲಿರಾ?

Anonymous said...

>>ಹೌದು ಬರೆಯುವುದು ಸುಲಭ, ಬರೆಯುವ ಮೂಲಕ, ದೃಶ್ಯಗಳ ಮೂಲಕ ಭಯೋತ್ಪಾದನೆಯಲ್ಲಿ ತೊಡಗಿರುವವರಿಗೆ ನಮ್ಮದೂ ಅದೇ ವಿಧಾನದ ಉತ್ತರ :)

ಬರಯುವುದೇ ನಿಮ್ಮ ಆಯ್ಕೆಯಾದರೆ, ಮಹಿಳಾ ಹೋರಾಟಗಾರರು, ರಾಜಕಾರಣಿಗಳು, ಮಾನವಹಕ್ಕು ಹೋರಾಟಗಾರನ್ನು ಸಾರಾಸಗಟಾಗಿ ಬಯ್ಯುವ ಬದಲು, ಪ್ರತ್ಯೇಕ ಘಟನೆಗಳನ್ನು ಆಯ್ದುಕೊಂಡು ಆ ಘಟನೆಗಳಿಗೆ ಸಂಬಂಧಿಸಿದಂತೆ ಅಲ್ಲಾದ ತಪ್ಪು-ಒಪ್ಪುಗಳ ಬಗ್ಗೆ ಬರೆಯುವುದರಲ್ಲಿ ಹೆಚ್ಚು ಉಪಯೋಗ ಇದೆ.

ನೀವು ಬರೆದಿರುವ ಪೋಸ್ಟ್ ನಲ್ಲಿ, ಹೆಣ್ಣು ನಿಮ್ಮ ನಾಡಿನಲ್ಲಿ ಅಸುರಕ್ಷಿತ ಎಂಬುದು ಸರಿಯೋ (>>ಹೆಣ್ಣು ಈ ನಾಡಿನಲ್ಲಿ ಅಸುರಕ್ಷಿತ ಎಂದು ಬಿಂಬಿಸಹೊರಡಿರುವುದು ಖೇದಕರ)

ಅಥವಾ ನೀವೇ ಪಟ್ಟಿ ಮಾಡಿರುವ ದೌರ್ಜನ್ಯಗಳು ನಿಜವೋ? (>>ಈ ಮಹಿಳಾ ಪ್ರಗತಿಪರರಿಗೆ ಕೇಳ ಬಯಸುವ ಪ್ರಶ್ನೆ ಗಳು ....

* ಇತ್ತಿಚಿನ ಕೆಲವು ದಿನ ಗಳಿ0ದ ಯುವತಿಯರ ಮೇಲೆ ಹಲವಾರು ಹಲ್ಲೆಗಳು ನಡೆದ್ದಿದ್ದು ಆ ಸಮಯದಲ್ಲಿ ಈ ಮಹಿಳಾ ಮಣಿಗಳು ಎಲ್ಲಿ ಭೂಗತರಾಗಿದ್ದರು?
* ವಾರದ ಹಿ0ದೆ ಮ0ಗಳೂರು ಹೊರವಲಯದ ಕಣ್ಣೂರು ಎ0ಬಲ್ಲಿ ಒಬ್ಬಳು ಯುವತಿ ಸೇರಿದ0ತೆ ಒಟ್ಟು ಮೂವರು ಹುಡುಗಿಯರು ಸ0ಶಯಾಸ್ಪದ ರೀತಿಯಲ್ಲಿ ಬೆ0ಕಿಗೆ ಆಹುತಿ ಯಾದಾಗ ಈ ಮಹಿಳಾ ಮಣಿಗಳು ಏಕೆ ದ್ವನಿ ಎತ್ತಿಲ್ಲ?
* ಇತ್ತಿಚೆಗೆ ಸುರತ್ಕಲ್ ,ಕಾಟಿಪಳ್ಳ ದಲ್ಲಿ ಹಿ0ಸಾಚಾರ ಸಂಭವಿಸಿದಾಗ ಯುವಕರ ತ0ಡ ಮಹಿಳೆಯೊಬ್ಬಳು ಧರಿಸಿದ ವಸ್ತ್ರಹರಿದು ಹಲ್ಲೆ ನಡೆಸಿದಾಗ ಏಕೆ ಪ್ರತಿಭಟನೆಗೆ ಇಳಿಯಲಿಲ್ಲ?)

ಇಷ್ಟೆಲ್ಲಾ ನಡೆಯುತ್ತಿರುವಾಗ ಹೆಣ್ಣು ಸುರಕ್ಷಿತಳು ಎಂದು ಹೇಗೆ ಹೇಳುತ್ತೀರಿ? ಇಂಥ ಎಷ್ಟು ಘಟನೆಗಳು ಹಾಗು ಎಷ್ಟು ಸಮಯದ ಚೌಕಟ್ಟಿನಲ್ಲಿ ಪುನರಾವರ್ತನೆಯಾದಾಗ ನಿಮ್ಮ ನಾಡು ಅಸುರಕ್ಷಿತ ಎಂದು ನಿರ್ಧರಿಸುತ್ತೀರಿ?

Mediapepper said...

ಅನಾನಿಮಸ್
ಮ0ಗಳೂರು ತಾಲಿಬಾನಿಗಳ ನಾಡು,ರಸ್ತೆಯಲ್ಲಿ ಯುವತಿಯರು ನಡೆದಾಡುವ0ತಿಲ್ಲ ಎ0ದು ಸೋ ಕಾಲ್ಡ ರಾಷ್ಟ್ರೀಯ ಚಾವಲ್ ಗಳು ಬಿ0ಬಿಸುತ್ತಿರುವ mentality ನಿಮ್ಮ ದಾಗಿದ್ದಲ್ಲಿ ನಿಮಗೆ ಶುಭವಾಗಲಿ.field ಗೆ ಇಳಿಯದೇ ವಾಸ್ತವದ ಅರಿವಿಲ್ಲದ ಒ0ದೆರಡು ದಿನ ಠಿಕಾಣಿ ಹೂಡಿ ಕಿವಿಮಾತಿಗೆ ಬೆಲೆಕೊಟ್ಟು ವರದಿ ಮಾಡುವ ಈ ಚಾನಲ್ ಗಳ ವರದಿಗಾರರ ವೈಖರಿ ನಿಮಗೆ ಸರಿ ಅನಿಸಿದರೆ ಅದನ್ನೆ ನ0ಬಿ best of luck.
ಇನ್ನು ಮಹಿಳಾ ಪ್ರಗತಿ ಪರರ ಬಗ್ಗೆ.
ಅನ್ಯಾಯ ,ಹಿಂಸೆ ,ದೌರ್ಜನ್ಯದ ಬಗ್ಗೆ ಮಾತನಾಡುವ ಇವರು ಮೂರು ದಿನಗಳ ಹಿ0ದೆ ಆತ್ಮಹತ್ಯೆ ಮಾಡಿಕೊ0ಡ ಬಡ ವಿದ್ಯಾರ್ತಿನಿ ಅಶ್ವಿನಿ ಬಗ್ಗೆ ಯೇಕೆ ಮಾತನಾಡುತ್ತಿಲ್ಲ . ಇವರ ಕಣ್ಣೆಕೆ ನೆನೆಯಲಿಲ್ಲ. ಕೇವಲ ಮೇಲ್ವರ್ಗದ ಯುವತಿಯರ ಮೇಲೆ ಮಾತ್ರ ಅತ್ಯಾಚಾರ ಹಿ0ಸೆ ಆಗುವುದೆ.
ಈ ಮಹಿಳಾ ಪ್ರಗತಿ ಪರರು ಎ0ದು ಪೋಜು ಕೊಡುವ ಈ ಬಣ್ಣದ ಬೀಸಣಿಗೆ ಗಳ ಬಣ್ಣದ ಮಾತು ನಾಲ್ಕು ದಿನ. ತನ್ನ ಹಕ್ಕಿಗಾಗಿ ಹೋರಾಡುವ ಮಹಿಳೆ ಹಳ್ಳಿಗಳಲ್ಲಿ ನೆಲೆಸುತ್ತಾಳೆ ಅವಳು ಎದ್ದಾಗ ಮಾತ್ರ ಕ್ರಾ0ತಿ ಯಾಗುತ್ತದೆ.
ಜನಪ್ರತಿನಿಧಿಗಳ , ಅಧಿಕಾರಿಗಳ ಬಗ್ಗೆ ನ0ಬಿಕೆ ಇಟ್ಟಿದ್ದಿರಲ್ಲ ನಿವೇ ಧನ್ಯರು .

Anonymous said...

ಸರಿಯಾಗಿಯೇ ಬರೆದಿದ್ದೀರಿ ಸಾರ್. ಮಾಧ್ಯಮ ಈಚೀಚೆಗೆ ತುಂಬಾ ಕೆಟ್ಟು ಹೋಗಿದೆ...