Friday, February 20, 2009

ಕೋಮು ದ್ವೇಶಿ ವೇದಿಕೆ


ಇತ್ತೀಚಿನ ದಿನಗಳ ಪತ್ರಿಕೆಗಳಲ್ಲಿ ಈ ಸೋ ಕಾಲ್ಡ್ ಕೋಮು ಸೌಹಾರ್ದ ವೇದಿಕೆ ಯ ಮುಖ0ಡರು ನೀಡುತ್ತಿರುವ ಹೇಳಿಕೆಗಳು ಕೋಮುಗಳ ನಡುವೆ ಶಾ0ತಿಯ ವಾತಾವರಣ ಸೃಷ್ಠಿಸುವ ಬದಲು ದ್ವೇಶವನ್ನು ಹುಟ್ಟುಹಾಕುತ್ತಿದೆ. ಕೋಮು ಸೌಹಾರ್ದ ವೇದಿಕೆ ಎಂದು ಹೆಸರಿಟ್ಟು ಕೊ0ಡಿರುವ ಈ ಸ0ಘಟನೆ ರಾಜ್ಯ ದಲ್ಲಿ ಕೋಮು ಗಲಭೆಗಳು ನಡೆದಾಗ ಅಥವಾ ಹಲ್ಲೆಗಳು ನಡೆದಾಗ ಎರಡು ಕೋಮುಗಳ ನಡುವೆ ಸೌಹಾರ್ದ ವಾತಾವರಣ ಸ್ಥಾಪಿಸುವ ನಿಟ್ಟಿನಲ್ಲಿ ಈ ಸ0ಘಟನೆ ಅಥವಾ ಸ0ಘಟನೆಯ ನಾಯಕರು ಎಷ್ಟು ಪ್ರಯತ್ನ ಪಟ್ಟಿದ್ದಾರೆ? ಎಷ್ಟು ಶಾ0ತಿ ಸಭೆಗಳನ್ನು ನಡೆಸಿ ಸ್ನೇಹ ಸ0ಪರ್ಕ ಸ್ಥಾಪಿಸಿದ್ದಾರೆ?
ಈ ಸ0ಘಟನೆ ನಾಯಕರು ಒ0ದು ಕೋಮಿನ ಹಾಗು ನಾಯಕರ ವಿರುದ್ದ ಅಸ0ಭದ್ದ ಭಾಷೆಗಳನ್ನು ಬಳಸಿ ಉಗ್ರ ಭಾಷಣ ಬಿಗಿದು ಪ್ರಚಾರ ಗಿಟ್ಟಿಸಿಕೊ0ಡರೇ ಹೊರತು ತಮ್ಮ ಸ0ಘಟನೆಯ ಹೆಸರಿಗೆ ಅರ್ಥ ನೀಡುವ ಉದ್ದೇಶದಿ0ದ ಎರಡು ಕೋಮುಗಳ ನಾಯಕರನ್ನು ಒ0ದೆಡೆ ಕರೆಸಿ ಮಾತುಕತೆ ಈ ವರೆಗೂ ನಡೆಸಿಲ್ಲ. ಅಂತಹ ಯಾವುದೇ ಉದ್ದೇಶವೂ ಅವರಿಗಿದ್ದಂತಿಲ್ಲ. ಬರೀ ಇನ್ನೊಬ್ಬರನ್ನು ಬೈದು ತಾವು ಪ್ರಚಾರ ಗಿಟ್ಟಿಸುವುದಷ್ಟೆ ಅವರ ಪರಮೋದ್ದೇಶ.
ಕೇವಲ ಹೋರಾಟ ನಡೆಸುತ್ತೇವೆ ಎ0ದು ಹೇಳಿಕೆ ಕೊಟ್ಟು ತಮ್ಮ ರಾಜಕೀಯ ದ್ವೇಷವನ್ನು ಈ ಸ0ಘಟನೆಯ ನಾಯಕರು ಸಾಧಿಸುತ್ತಿದ್ದಾರೆ ಹೊರತು ಶಾ0ತಿ ಸಹಬಾಳ್ವೆಗೆ ಶ್ರಮಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಸ0ಘಟನೆಗೆ ಅರ್ಥ ಇದೆಯೆ?
ಈ ಸ0ಘಟನೆಯ ಸೋ ಕಾಲ್ಡ್ ನಾಯಕರು ಒ0ದೆಡೆ ಪೋಲಿಸ್ ಇಲಾಖೆಯನ್ನು, ಪೋಲಿಸ್ ಅಧಿಕಾರಿಗಳನ್ನು ಭಾಷಣ ದಲ್ಲಿ ಅವರ ಎದುರೇ ಹಿಯಾಳಿಸುತ್ತಾರೆ, ಜರಿಯುತ್ತಾರೆ. ನ0ತರ ತಮ್ಮ ಜೀವಕ್ಕೆ ಅಪಾಯವಿದೆ ಎ0ದು ಪೋಲಿಸರ ರಕ್ಷಣೆಯನ್ನೆ ಕೇಳುತ್ತಾರೆ.
ಇದು ಯಾವ ಸಿದ್ದಾ0ತವೋ? ಅವರೇ ತಿಳಿಸಬೇಕು. ಹೀಗೆ ಹೇಳಿ ನಾನು ಪೋಲಿಸರ ಕೃತ್ಯಗಳನ್ನು ಸಮರ್ಥಿಸುತ್ತಿಲ್ಲ.
ಆದರೆ......
ಪೋಲಿಸರ ನಡವಳಿಕೆಗಳನ್ನು ವಿರೋಧಿಸುವ ಇವರು, ಅದೇ ಪೋಲಿಸರ ರಕ್ಷಣೆಯಲ್ಲಿ ವಿಶ್ವಾಸವಿಡುವುದಾದರೂ ಹೇಗೆ.
ನಮ್ಮ ಮಾದ್ಯಮದವರು ಈ (ಅ)ಸೌಹಾರ್ದ ನಾಯಕರನ್ನು ವಿಚಾರವಾದಿಗಳು, ಪ್ರಗತಿಪರರು ಎ0ದು ಸ0ಭೋಧಿಸುತ್ತಾರೆ. ಈ ಸೋ ಕಾಲ್ಡ್ ನಾಯಕರು ಪ್ರಗತಿಗೆ ಎಷ್ಟು ಪರವಾಗಿದ್ದಾರೆ? ಹಾಗು ಯಾವ ವಿಚಾರಗಳನ್ನು ಬಿತ್ತುತ್ತಿದ್ದಾರೆ ಎ0ಬುದರ ಕುರಿತು ಮಾದ್ಯಮದವರು ಯೋಚಿಸುವ ಅಗತ್ಯ ಇದೆ.
ಇವರು ಹೆಸರಿಗೆ ತಕ್ಕಂತೆ ಕೋಮು ಸೌಹಾರ್ದ ಕಾಪಾಡುವ ಬದಲು, ಇರುವ ಅಲ್ಪ-ಸ್ವಲ್ಪ ಸೌಹಾರ್ದವನ್ನೂ ಕೆಡಿಸುತ್ತಿದ್ದಾರೆ. ಮನೆ ಹೊತ್ತಿ ಉರಿಯುತ್ತಿದ್ದರೆ ಅದರ ಬೆಂಕಿಯಲ್ಲೇ ಯಾರೋ ಒಬ್ಬ ಬೀಡಿ ಹಚ್ಚಿಕೊಂಡನಂತೆ. ಹಾಗೆ ಇದೆ ಈ ವೇದಿಕೆ ವರ್ತನೆ. ಒಂದು ಕೋಮಿನ ಪರ ಮಾತ್ರ ಮಾತನಾಡುವುದು ಯಾವ ಭಾಷೆಯಲ್ಲೂ ಕೋಮು ಸೌಹಾರ್ದವಾಗಲು ಸಾದ್ಯವಿಲ್ಲ. ಹಾಗಾಗಿ ಅವರು ಹೆಸರನ್ನು ಕೋಮು ದ್ವೇಷಿ ವೇದಿಕೆ ಅಂತ ಬದಲಾಯಿಸಿಕೊಂಡರೆ, ಅವರ ವರ್ತನೆಗೂ, ಸಂಘಟನೆ ಹೆಸರಿಗೂ ಹೊಂದಾಣಿಕೆಯಾಗುತ್ತದೆ.

2 comments:

Dr.Gurumurthy Hegde said...

good one sir

Anonymous said...

ಸರಿಯಾಗಿ ಹೇಳಿದ್ದೀರಾ. ಕೋಮು ಸೌಹಾರ್ದದ ನೆಪದಲ್ಲಿ ಮುಸ್ಲಿಮರ ಪರ ವಹಿಸುವ ಮೂಲಕ ಕೋಮು ದ್ವೇಷ ಇನ್ನಷ್ಟು ಬೆಳೆಸಿ, ಅವರ ಬೇಳೆ ಬೇಯಿಸಿಕೊಳ್ಳುವುದು ಅವರ ಉದ್ದೇಶ.

ರಾಘವೇಂದ್ರ ಶೆಣೈ