Friday, March 6, 2009

ಇದು ಫೊಟೋಫಿನಿಶ್ ಪ್ರೇಮ್ ಕಹಾನಿ!

ಸಂಬಂಧಿಯ ಭರ್ಜರಿ ಮದುವೆ ಹೇಗಾಯ್ತು?
ಕುತೂಹಲ ತಡೆಯಲಾರದೆ ಮನೆಗೆ ಬಂದ ಆಲ್ಬಂ ನೋಡುತ್ತಿದ್ದ ಹದಿಹರೆಯದ ಹುಡುಗಿ ಮತ್ತಷ್ಟು ಕೆಂಪೇರುವಂತೆ ಮಾಡಿದ್ದು ಮದುವೆಮನೆಯಲ್ಲಿ ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದ ಅವಳದ್ದೇ ಫೊಟೋ.
ಅರೇ.. ನನ್ನ ಫೋಟೋ ಹೀಗೂ ಚೆನ್ನಾಗಿ ಬರುವುದುಂಟೇ ಎಂದು ಹಿರಿಹಿರಿ ಹಿಗ್ಗಿದ ಹುಡುಗಿಯ ಮನ ಫೋಟೋ ತೆಗೆದ ಯುವಕನನ್ನು ನೆನಪಿಸಿಕೊಂಡಳು. ವ್ಹಾ..! ಅವನೂ ಮನ್ಮಥನಂತಿದ್ದಾನಲ್ಲ ಎಂದು ನಾಚಿ ನೀರಾದಳು. ಅವನು ಹ್ಯಾಗೆ ಸಿಗ್ತಾನೆ? ಎಂದು ಯೋಚಿಸುತ್ತಾ ಬುದ್ದಿ ಓಡಿಸಿದಾಕೆಗೆ ಸಿಕ್ಕಿದ್ದು ಆಲ್ಬಂನಲ್ಲಿ ಫೊಟೊಗ್ರಾಫರ್ ನಂಬ್ರ.
ಅಲ್ಲಿಂದ ಕಥೆ ಆರಂಭ
**************
ಇದು ಭಾರತ ದೇಶದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕೆಂಬ ಪ್ರದೇಶದಲ್ಲಿ ನಡೆದ ಲವ್ ಸ್ಟೋರಿ.
ಫೋಟೋಗ್ರಾಫರ್ ನ ಅಂದ ಚೆಂದಕ್ಕೆ ಮರುಳಾದ ಹುಡುಗಿ ಫೋನ್ ಮಾಡಿ ‘ಈ ವಾ ಪೊರ್ಲು ಯಾ..(ನೀನು ಚೆಂದಾನೋ)’ ಎಂದು ಹೇಳಿಯೇ ಬಿಟ್ಟಳು. ಇಂಥ ಹುಡುಗಿಯರನ್ನೆಸ್ಟು ಆತ ನೋಡಿದ್ದನೋ.. ಸಿಕ್ಕಿದ್ದು ಬಿಡುವುದು ಯಾಕೆ ಎಂದು ಅವನೂ ಚೆನ್ನಾಗಿ ನಾಟಕವಾಡಿದ. ಅವನಿಗಿದ್ದದ್ದು ಪ್ಯೂರ್ ಕಾಮ. ಅವಳಿಗಿದ್ದದ್ದು ಪ್ಯೊರ್ ಪ್ರೇಮ. ಹೀಗೆ ಪ್ರೇಮ, ಕಾಮದಾಟದಲ್ಲಿ ಕಾಮ ಗೆದ್ದಿತು. ಅವರಿಬ್ಬರು ಗುಡ್ಡೆ, ಪಾರ್ಕು, ಸಿನಿಮಾ, ಹೋಟೆಲ್ ಓಡಾಡಿ ಸುಸ್ತಾದರು. ಅವಳು ತನು, ಮನ ಅವನಿಗರ್ಪಿಸಿದಳು. ಅವನು ತನುವನ್ನು ಮಾತ್ರ ಕೊಟ್ಟ!
*********
ಹೀಗೆಲ್ಲಾ ನಡೆಯುತ್ತಿದ್ದರೂ ಹುಡುಗಿ ಅಪ್ಪ, ಅಮ್ಮಂದಿರಿಗೆ ವಿಶಯವೇ ಗೊತ್ತಿಲ್ಲ. ಹಾಗಾಗಿಯೇ ಹುಡುಗಿಯ ಅಣ್ಣನಿಗೆ ಮದುವೆ ನಿಘಂಟು ಮಾಡುವಾಗ ಹುಡುಗಿಗೂ ಒಳ್ಳೆ ಹುಡುಗನನ್ನು ನೋಡಿದರು. ಎಂಗೇಜ್ ಮೆಂಟ್ ಆಯಿತು. ಅಪ್ಪ, ಅಮ್ಮಂದಿರಿಗೆ ಹೇಳಲು ಹುಡುಗಿಗೂ ಧೈರ್ಯ ಬರಲಿಲ್ಲ. ಫೋಟೋಗ್ರಾಫರ್ ಸದ್ದೇ ಮಾಡಲಿಲ್ಲ.
**********
ಮದುವೆಯ ದಿನ ಬಂದೇ ಬಿಟ್ಟಿತು. ಬಿ.ಸಿ.ರೋಡಿನ ರಂಗೋಲಿ ಎಂಬ ಮಂಟಪದಲ್ಲಿ ಎರಡು ಮದುವೆ. ಫೋಟೋಕ್ಕೆ ಅದೇ ಹುಡುಗ. ಮೆಲ್ಲನೆ ಹುಡುಗಿಯ ಕಿವಿಯ ಬಳಿ ಬಂದು ಉಸುರಿದ. ‘ನೀನು ಅವನನ್ನೇ ಮದುವಯಾಗು. ನಾಳೆ ನಿನ್ನನ್ನು ಹಾರಿಸಿಕೊಂಡು ಹೋಗ್ತೇನೆ’
ಅವಾಕ್ಕಾದ ಹುಡುಗಿ ಒಂದು ಗಟ್ಟಿ ನಿರ್ಧಾರಕ್ಕೆ ಬಂದಳು.
*********
ಪುರೋಹಿತರ ಮಂತ್ರ, ಗಟ್ಟಿಮೇಳದ ಸದ್ದು ನಡೆಯುತ್ತಿತ್ತು. ವರ ಮಾಲೆ ಹಾಕಿಸಿಕೊಳ್ಳಲು ಸಿದ್ದನಾಗಿದ್ದ. ಆದರೆ ವಧು ಒಮ್ಮೆಗೇ ಫೋಟೋ ತೆಗೆಯುತ್ತಿದ್ದವನ ಬಳಿ ಧಾವಿಸಿ, ಅವನಿಗೇ ಮಾಲೆ ಹಾಕಲು ಹೆಜ್ಜೆ ಹಾಕಿದಳು. ಆಗ ಸಭಾಂಗಣವೆಲ್ಲ ಗಪ್ ಚಿಪ್!
********
ದಡಬಡನೆ ಫೋಟೋಗ್ರಾಫರ್ ಓಡಿದ. ಅವನನ್ನು ಹಿಡಿದು ಪೋಲೀಸ್ ಸ್ಟೇಶನ್ ಗೆ ಒಪ್ಪಿಸಲಾಯಿತು. ಮತ್ತೆ ಮಾತುಕತೆ ನಡೆಯಿತು. ಹುಡುಗಿ ನಾನು ಅವನನ್ನೇ ಲವ್ ಮಾಡಿದ್ದೇನೆ ಅಂದಳು. ಹುಡುಗ ಇಲ್ಲ, ಇಲ್ಲ ಎಂದ..
******
ಕೊನೆಗೂ ಹುಡುಗಿಯ ಹಟ ಗೆದ್ದಿತು. ಈಗವರು ಸತಿ, ಪತಿ.
ಅದಕ್ಕಾಗಿಯೇ ಏನೋ ದ.ಕ.ಫೋಟೋಗ್ರಾಫರ್ ಗಳ ಮೊಬೈಲ್ ಗಳಲ್ಲಿ ಸಂದೇಶ ಹರಿದಾಡುತ್ತಿದೆ.
“ಮದುವ ಸಮಾರಂಭಗಳಿಗೆ ಫೊಟೊ ತೆಗೆಯಲು ಹೋಗುವಾಗ ಮಾಲೆ ಹಾಕುವ ಸಮಯ ಫೋಟೋಗ್ರಾಫರ್ ಕ್ಯಾಮ್ರಾ ಜೂಮ್ ಇಟ್ಟು, ೧೮ ಮೀಟರ್ ದೂರ ನಿಲ್ಲಿ!”

5 comments:

VENU VINOD said...

ಹಹಹ...good one...
ಸೀರಿಯಸ್ ವಿಷಯಗಳ ನಡುವೆ ಇದೊಂದು ಹ್ಯೂಮರ್‍ :)

Anonymous said...

ಕತೆ ಅದ್ಭುತ. ಸುಂದರ ಬರವಣಿಗೆ. ವೇಣು ಹೇಳಿದಂತೆ ಗಂಭೀರ ವಿಷಯಗಳ ನಡುವೆ ಇದೊಂದು ಹ್ಯೂಮರ್ ಕಹಾನಿ ಖುಷಿಕೊಟ್ಟಿತು.

Anonymous said...

Suddine illa?
band madidra?

- Kolya, Yeyyadi

Anonymous said...

Story begins
NOW

-- Kolya

ದಿನಕರ ಮೊಗೇರ said...

ತುಂಬಾ ಚೆನ್ನಾಗಿದೆ , ನಿಜವಾದ ಕಥೆಯನ್ನ ಸರಳವಾಗಿ ಹೇಳಿದ್ದಿರಾ.... ಲೋಕಲ್ ಪೇಪರ್ನಲ್ಲಿ ಈ ಸುದ್ದಿ ಓದಿದ್ದೆ... ಆದ್ರೆ ಇಷ್ಟು ಸಿಂಪಲ್ ಆಗಿ ಇರ್ಲಿಲ್ಲ.....