Thursday, April 14, 2011

ಉಳಿದ ಚಾನೆಲ್ಲೂಗಳ ಭರಾಟೆಯಲ್ಲಿ ಈ ಟಿವಿ ಮಂಕಾಯಿತೇ ?


ಆಂಧ್ರದ ತೆಲುಗು ಮೂಲದ ಈ-ಟಿವಿ ಕನ್ನಡ ಕುರಿತು ಒಂದು ಕಾಲಕ್ಕೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದವು. ಮುಕ್ತ, ಗುಪ್ತಗಾಮಿನಿ ಧಾರಾವಾಹಿಗಳಿಂದ ಮೊದಲ್ಗೊಂಡು ಎದೆ ತುಂಬಿ ಹಾಡುವೆನು ಸಂಗೀತ ಕಾರ್ಯಕ್ರಮ ಮತ್ತು ದೈನಂದಿನ ಸುದ್ದಿಯವರೆಗೆ ಹಲವು ವಿಶಿಷ್ಟ ಕಾರ್ಯಕ್ರಮಗಳು ಜನರ ಮನಸೂರೆಗೊಂಡಿದ್ದವು. ಆದರೆ ಸುವರ್ಣ, ಜೀ ಕನ್ನಡ ಮತ್ತು ಕಸ್ತೂರಿ, ಟಿವಿ9 ವಾಹಿನಿಗಳ ಆಕ್ರಮಣಕಾರೀ ಶೈಲಿಯ ಕಾರ್ಯಕ್ರಮಗಳಿಂದಾಗಿ ಈ-ಟಿವಿ ಕೊಂಚ ಮಂಕಾದಂತೆ ಕಾಣುತ್ತಿದೆ. ಒಂದು ಕಡೆ ಕಳಪೆ ಮತ್ತು ವಿಕ್ಷಕರನ್ನು ಹಿಡಿದಿಟ್ಟುಕೊಳ್ಳಲಾಗದ ಟೀವಿ ನಿರೂಪಕರು ಮತ್ತು ಶೋಗಳು ವಿಫಲವಾಗುತ್ತಿವೆ. ಈ ಟಿವಿ ಮೂಲ ರೂವಾರಿ ಕರ್ನಾಟಕದ ವ್ಯವಸ್ಥಾಪಕ ಸುಬ್ಬಯ್ಯ ನಾಯ್ಡು. ಅವರು ಕಳೆದ ದಶಕದಿಂದ ಚಾನೆಲ್ಲನ್ನು ಕಟ್ಟಿ ಬೆಳೆಸಿದ್ದಾರೆ ಎಂದರೆ ತಪ್ಪಾಗಲಾರದು.ಈ ಟಿವಿ ಜನಪ್ರಿಯತೆ ಹೆಚ್ಚಿಸುವ ನಿಟ್ಟಿನಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ತುಂಬಾ ಸಹಾಯಕಾರಿಯಾಗಿತ್ತು. ಸ್ಪರ್ಧಿಗಳಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂರವರು ನೀಡುತ್ತಿದ್ದ ಸಾಂದರ್ಭಿಕ ಸಲಹೆ, ಹಾಸ್ಯ, ಉತ್ತೇಜನಗಳು ವೀಕ್ಷಕರಿಗೆ ಇಂದಿಗೂ ಇಷ್ಟವಾಗುತ್ತಿವೆ. ಈ ಟಿವಿ ಗೆ ಪರ್ಯಾಯವಾಗಿ ಸುವರ್ಣ ವಾಹಿನಿಯಲ್ಲಿ ಹಾಗೂ ಜೀ ಕನ್ನಡ, ಕಸ್ತೂರಿ ವಾಹಿನಿಗಳಲ್ಲಿ ಅನೇಕ ಕಾರ್ಯಕ್ರಮಗಳು ಬಂದವು ಮಾತ್ರವಲ್ಲ ವೀಕ್ಷಕವೃಂದವನ್ನೂ ತನ್ನತ್ತ ಸೆಳೆಯುವಲ್ಲಿ ಸಫಲವಾದುವು ಎಂಬ ಮಾತು ಸತ್ಯ. ಆದರೆ ಇದನ್ನು ತನ್ನ ಗುಣಾತ್ಮಕ ಕಾರ್ಯಕ್ರಮಗಳ ಮೂಲಕವೇ ಎದುರಿಸಬೇಕಿದ್ದ ಈ-ಟಿವಿ ತಾನೂ ಸಹ ಕೊಂಚ ಹೊರಳುದಾರಿ ತುಳಿದಿದೆ. ಅಪ್ಪಟ ಸಾಂಸಾರಿಕ ಚಾನೆಲ್ ಎಂಬ ಹೆಸರು ಪಡೆದಿದ್ದ ಈ-ಟಿವಿಯಲ್ಲಿ ಲಾಲನೆಯರ ತೊಡೆ ಪ್ರದರ್ಶಿಸುವ ತೆಲುಗು ಮೂಲದ ವಾವ್ ನಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ ಆದರೂ ವೀಕ್ಷಕರಿಗೆ ಅದರಲ್ಲೂ ಕುಟುಂಬ ಸಮೇತರಾಗಿ ವೀಕ್ಷಣೆ ಮಾಡಲು ಅಪಥ್ಯವಾಗಿವೆ. ಆದರೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಯಾವುದೇ ಆಡಂಬರವಿಲ್ಲದೆ ದೇವರ ಮುಂದೆ ಶಾಂತವಾಗಿ ಬೆಳಗುವ ನೀಲಾಂಜನದಂತೆ ದಶಕದ ನಂತರ ಇಂದಿಗೂ ನಡೆದುಕೊಂಡು ಬರುತ್ತಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ.
ಈ ಟಿವಿ ಸುದ್ದಿ ವಿಭಾಗದಲ್ಲಿ ಬರೆದರೆ ಮುಗಿಯದಷ್ಟು ಇದೆ. ಒಂದು ಕಾಲದಲ್ಲಿ ಈ ಟಿವಿ ಸುದ್ದಿಗಳು ಸ್ಪಷ್ಟತೆಗೆ ಹೆಸರಾಗಿದ್ದುವು. ಇಂದು ಉಳಿದ ಚಾನೆಲ್ಲೂಗಳೊಂದಿಗೆ ಸ್ಪರ್ಧೆಗೆ ಇಳಿದು ಅದು ಅವನತಿಯತ್ತ ಹೆಜ್ಜೆ ಹಾಕುತ್ತಿದೆ. ಸುದ್ದಿ ಹೇಗೆ ಮತ್ತು ಎಲ್ಲಿ ಕೊಡಬೇಕು. ಹೆಡ್ ಲೈನ್ ಗಳನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಗೊಂದಲಗಳು ಸುದ್ದಿ ವಿಭಾಗದವರಿಗಿದೆ. ಇದಕ್ಕೆ ಬಹುಷ ಸುದ್ದಿ ವಿಭಾಗದ ಮುಖ್ಯಸ್ಥರೆಂದು ಹೇಳಿ ಕೊಳ್ಳುವ ಜಗದೀಶ್ ಮಣಿಯಾಣಿ ಕಾರಣರಂತೆ. ಅವಿಧ್ಯಾವಂತ ಮತ್ತು ಅವಿವೇಕಿಯಾದ ಈತ ಜಗಳಗಂಟಿ ಮತ್ತು ಅತ್ಯಂತ ಕೊಳಕು ಮುಖ ಮತ್ತು ಕೊಳಕು ಮನಸ್ಸಿನ ಮನುಷ್ಯನಂತೆ.!ಏಲ್ಲೋ ಕೆಲಸವಿಲ್ಲದೆ ಕೊಳಚೆಯಲ್ಲಿ ಈತನನ್ನು ಜಿ.ಎನ್. ಮೋಹನ್ ತಂದು ಕೂರಿಸಿದ ಮೇಲೆ ಅದೇಷ್ಟೋ ಒಳ್ಳೆಯರು ಚಾನೆಲ್ ಬಿಟ್ಟು ಹೊರ ನಡೆದರು.ಇನ್ನೊಂದು ದುರಂತ ಎಂದರೆ ಈತ ಕೆಲಸ ಮಾಡಲು ಹೋದ ಸಂಸ್ಥೆಗಳು ಬಾಗಿಲು ಮುಚ್ಚ್ಚುತ್ತಿದ್ದಾವಂತೆ, ಉದಾ: ಹೊಸಸಂಜೆ,ಜನವಾಹಿನಿ,ಕೆನರಾ ಟೈಂಮ್ಸ್,ಮುಂತಾದುವು. ಈ ಟಿವಿ ಗೂ ಆಗತಿ ಬಾರದಿರಲಿ ಎಂಬುದೇ ನಮ್ಮೆಲ್ಲರ ಹಾರೈಕೆ. ಒಂದು ಕಾಲದಲ್ಲಿ ಸುದ್ದಿ ಮಾದ್ಯಮಾದ ಘಟಾನುಘಟಿಗಳಾದ ಕೆ.ಎಂ.ಮಂಜುನಾಥ್ ,ಜಿ.ಎನ್. ಮೋಹನ್ ರಂತಾಹ ಪತ್ರಕರ್ತರು ಕಟ್ಟಿ ಬೆಳೆಸಿದ ಈ ಟಿವಿ ನ್ಯೂಸ್ ಜಗದೀಶನಂತಹ ಅವಿದ್ಯಾವಂತ ಮತ್ತು ಸುದ್ದಿಗಳ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದವನ ಕೈಗೆ ಕೊಟ್ಟ ಪರಿಣಾಮ ಹಳ್ಳ ಹಿಡಿಯುತ್ತಿರುವುದು ಬಹುಷ ದುರಂತವೇ ಸರಿ. ಈ ಕುರಿತು ಈ-ಟಿವಿ ಆಡಳಿತ ಮಂಡಳಿ ಶೀಘ್ರದಲ್ಲೇ ಗಮನ ಹರಿಸುವುದು ಒಳ್ಳೆಯದು .ಇವನ ಕರ್ಮ ಕಾಂಡ, ಹೈದ್ರಾಬಾದಿನ ಸೆಕ್ಸ್ ಪುರಾಣ ಇನ್ನೂ ಇದೆ.ಮುಂದಿನ ದಿನಗಳಲ್ಲಿ ಧಾರವಾಹಿ ರೂಪದಲ್ಲಿ ಬರೆಯುವಷ್ಟಿದೆ. ಮುಂದೆ ನಿರೀಕ್ಷಿಸಿ.

2 comments:

Anonymous said...

ಈ ಟಿವಿ ಬಗ್ಗೆ ನಮಗೆ ಒಳ್ಳೆಯ ಅಭಿಪ್ರಾಯವಿದೆ.ಉಳಿದ ಚಾನೆಲ್ ಗಳಿಗೆ ಹೋಲಿಸಿದರೆ ಈ ಟಿವಿ ಎಂಟ್ರೆಟೈನ್ ಮೆಂಟ್ ಒಳ್ಳೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ.
ಸುದ್ದಿಗಳು ತೀರಾ ಕಳಪೆಯದ್ದು ಎಂಬುದರಲ್ಲಿ ಎರಡು ಮಾತಿಲ್ಲ ಬಿಡಿ.ಜಗದೀಶ ಮನಿಯಾಣಿ ಬಗ್ಗೆ ಬಹುಷ ಬರೆದದ್ದು ಸ್ವಲ್ಪ ಕಡಿಮೆ ಆಯಿತು. ಇನ್ನೂ ಇದೆ ಬೇಕಾದರೇ ನಿಮಗೆ ನಾನೇ ಒದಗಿಸುತ್ತೇನೆ.ಅವನ ಕರ್ಮಕಾಂಡ ಜಗತ್ತಿಗೇ ಗೊತ್ತಾಗಬೇಕು..

Anonymous said...

ಜಗದೀಶ ಎಂಬ ಧೂರ್ತನಿಂದ ಈ ಟಿವಿ ನಲುಗಿ ಹೋಗಿದೆ.ಇವನನ್ನು ಯಾರು ಕೇಳುವವರಿಲ್ಲವೇ? ಶೋಭ ಕರಂದ್ಲಾಜೆ ಮತ್ತು ಇವನ ಸಂಬಂಧದ ಬಗ್ಗೆ ಕೂಡ ಸ್ವಲ್ಪ ಬೆಳಕು ಚೆಲ್ಲಿ..