Wednesday, April 27, 2011

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ನ ಕೊಳಕು ಮುಖಗಳು


ಮೊನ್ನೆ ಮೊನ್ನೆವರೆಗೂ ಆಂಗ್ಲ,ಹಿಂದಿ ವಾಹಿನಿಗಳಲ್ಲಿ ಮಾತ್ರ ನೊಡ್ತಾ ಇದ್ದಂತಹ ಈ ಹೊಲಸು ರೀಯಾಲಿಟಿ ಶೋ ಗಳು ಕನ್ನಡದ ವಾಹಿನಿಗಳಿಗೂ ಕಾಲಿರಿಸಿ ವರ್ಷಗಳೇ ಸಂದಿವೆ.ಇಂತಹ ಶೋ ಗಳ ನಿಜವಾದ ಬಣ್ಣ ಇದೀಗ ಬಯಲಾಗುತ್ತಿದೆ.ಯಾವ ರೀತಿಯ ರೀಯಾಲಿಟಿ ಶೋಗಳ ಹೆಸರಿನಲ್ಲಿ ಅಮಾಯಕರ ಅದರಲ್ಲೂ ಹದಿಹರೆಯದ ಹುಡುಗಿಯರನ್ನು ಶೋಷಣೆ ಮಾಡುತ್ತಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಸುವರ್ಣ ಚಾನೆಲ್ಲಿನ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಕಾರ್ಯಕ್ರಮ. ಕೇವಲ ಟಿಆರ್ ಪಿ ಮಾತ್ರ ಇಲ್ಲಿ ಕೆಲಸ ಮಾಡುತ್ತಿಲ್ಲ ಸ್ವಾಮೀ.ನಮಗೆ ಅರ್ಥತ್ ವೀಕ್ಷಕರಿಗೆ ಮೂರ್ಖರ ಪೆಟ್ಟಿಗೆಯಲ್ಲಿ ಎಡಿಟಿಂಗ್ ಆಗಿ ಇಷ್ಟು ಕಂಡರೆ,ಇನ್ನೂ ಒರಿಜಿನಲ್ ಕ್ಯಾಸೆಟ್ಟಿನಲ್ಲಿ ಏನ್ ಉಂಟು,ಏನಿಲ್ಲ ಸ್ವಾಮೀ? ಏನ್ ಇದೆ ಏನ್ ಇಲ್ಲಾ ಎಂದು ಕೇವಲ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಅವರುಗಳಿಗೇ ಗೊತ್ತು!ಇದು ಕೇವಲ ಸುವರ್ಣಾ ಚಾನೆಲ್ಲಿಗೇ ಮಾತ್ರ ಸೀಮಿತ ವಾಗಿಲ್ಲ.ಈ ವಿಷಯದಲ್ಲಿ ಎಲ್ಲಾ ಚಾನೆಲ್ಲಿನವರೂ ಸಮಾನ ಮನಸ್ಕರೇ..ಹಂಚಿ ತಿನ್ನುವ ಚಾಳಿ ಬೆಳೆಸಿದ್ದರಿಂದ ಇಂತಹ ಸೂಕ್ಷ್ಮ ವಿಷಯಗಳು ಹೊರ ಜಗತ್ತಿಗೇ ಬರಲ್ಲ.ಒಂದಷ್ಟು ದುಡ್ಡು,ಹೆಸರುಗಳಿಸಲು ಇಂತಹ ಕಾರ್ಯಕ್ರಮಗಳಿಗೆ ಸಹಿ ಹಾಕುವ ಹದಿಹರೆಯದ ಹುಡ್ಗಿರು ಶೋಗಳಲ್ಲಿ ಉಳಿಯಬೇಕಾದರೇ ಮಾನ ಬಿಟ್ಟು ಎಲ್ಲದಕ್ಕೂ ಸೈ ಎನ್ನಬೇಕು.'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ನ ರೀಯಾಲಿಟಿ ಶೋ ನ ಸ್ಪರ್ಧಿ ಅಕ್ಷತಾ ಮಾತ್ರ ಇಲ್ಲಿ ಕೊಂಚ ದಿಟ್ಟತನ ತೋರಿ ಹೊರಬಂದು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಮೇಲಾದ ಹಿಂಸೆ, ದೌರ್ಜನ್ಯಗಳ ಬಗ್ಗೆ ಮಹಿಳಾ ಆಯೋಗಕ್ಕೂ ದೂರಿತ್ತಳು.ಇವಳ ಧೈರ್ಯವನ್ನು ನಾವುಗಳು ಮೆಚ್ಚಲೇ ಬೇಕು ಮತ್ತು ಅವಳ ಮುಂದಿನ ಹೋರಾಟಕ್ಕೆ ಬೆಂಬಲ ನೀಡಬೇಕು.ಆದರೆ ಅವರು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತಾಳೆ ಎಂಬುಂದು ಕಾದು ನೋಡಬೇಕಿದೆ. ಕಾಣದ ಕೈಗಳು ಅವಳು ಮತ್ತು ಅವಳ ಕುಟುಂಬದವರನ್ನು ಸುಮ್ಮನೆ ಕೂರಲು ಬಿಡಕ್ಕಿಲ್ಲ.

No comments: