Tuesday, June 21, 2011

ಮಂಜುನಾಥನ ಜೊತೆಗೆ ಡೀಲ್ ಮಾಡಿದ್ದೇನೆ ಕಣ್ರೀ...


ರಾಜ್ಯಾದ್ಯಂತ ಆನೆಗಳು ಒಂದರ ಹಿಂದೆ ಒಂದರಂತೆ ನಾಡಿಗೆ ದಾಳಿಯಿಟ್ಟು ಎಲ್ಲವನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದರೆ, ಇತ್ತ ವಿಧಾನಸಭೆಯಲ್ಲಿ ‘ಆಣೆ’ಗಳ ದಾಳಿ ಆರಂಭವಾಗಿದೆ. ಒಂದಾಣೆ... ಎರಡಾಣೆ... ಮೂರಾಣೆ.... ಎಂದು ರಾಜ್ಯ ಸರಕಾರದ ಬೆಲೆಯನ್ನು ದೇಶದ ಜನರು ಆಣೆಯಲ್ಲಿ ಲೆಕ್ಕ ಹಾಕುತ್ತಿದ್ದಾಗಲೇ... ಯಡಿಯೂರಪ್ಪ ‘ಧರ್ಮಸ್ಥಳದಲ್ಲಿ ಆಣೆ ಹಾಕುತ್ತೇನೆ’’ ಎಂದು ಘೋಷಿಸಿ ಬಿಡುವುದೇ? ಪತ್ರಕರ್ತ ಎಂಜಲು ಕಾಸಿಗೆ ರೋಮಾಂಚನವಾಯಿತು. ಇಡೀ ವಿಧಾನಸೌಧವೇ ಧರ್ಮಸ್ಥಳಕ್ಕೆ ಎತ್ತಂಗಡಿಯಾಗುತ್ತಿರುವುದರಿಂದ ಈ ಆಣೆಯನ್ನು ರಾಷ್ಟ್ರಾದ್ಯಂತ ಚಲಾವಣೆಗೆ ತಂದರೆ ಒಳ್ಳೆಯದಲ್ಲವೆ? ಎನ್ನುವ ಆಲೋಚನೆ ಅವನ ಮನದಲ್ಲಿ ಸುಳಿದು ಹೋಯಿತು.

ಸರಿ, ಯಡಿಯೂರಪ್ಪರನ್ನು ಬೇಡಿ ಒಂದು ಸಂದರ್ಶನವನ್ನಾದರೂ ತೆಗೆದುಕೊಳ್ಳೋಣ ಎಂದು ಅವರ ನಿವಾಸಕ್ಕೆ ದೌಡಾಯಿಸಿದರು. ಅಲ್ಲಿ ನೋಡಿದರೆ ಯಡಿಯೂರಪ್ಪರ ಅಂಗರಕ್ಷಕರು ಕಾಸಿಯನ್ನು ತಡೆದರು. ‘‘ಒಳ ಹೋಗುವ ಮೊದಲು ಆಣೆ ಮಾಡಬೇಕಾಗುತ್ತದೆ’’ ಅಂಗರಕ್ಷಕರು ಹೇಳಿದರು.ಕಾಸಿ ಕಂಗಾಲಾದ. ಮೊದಲೆಲ್ಲ ಮಾರಕಾಯುಧ ಇದೆಯೇ ಎಂದು ತಪಾಸಣೆ ಮಾಡಲಾಗುತ್ತಿತ್ತು. ಇದೇನು ಆಣೆ? ಅವನಿಗೆ ಅರ್ಥವಾಗಲಿಲ್ಲ. ‘‘ನೋಡ್ರೀ...ಯಡಿಯೂರಪ್ಪ ಅವರು ಕೊಟ್ಟ ಕೇಸರಿಬಾತ್, ಚೌಚೌ ಬಾತ್ ತಿಂದು ಅವರ ವಿರುದ್ಧ ಪತ್ರಿಕೆಯಲ್ಲಿ ಬರೆಯುವುದಿಲ್ಲ ಎಂದು ಆಣೆ ಮಾಡಬೇಕು. ಹಾಗಾದಲ್ಲಿ ಮಾತ್ರ ಒಳಗೆ ಪ್ರವೇಶ’’.

‘‘ನನ್ನ ಸಂಪಾದಕರ ಮೇಲೆ ಆಣೆ ಮಾಡಿ ಹೇಳ್ತೇನೆ...ನಾನು ಯಡಿಯೂರಪ್ಪ ವಿರುದ್ಧ ಬರೆಯೋಲ್ಲ...’’ ಕಾಸಿ ಆಣೆ ಮಾಡಿಯೇ ಬಿಟ್ಟ. ಅಂಗರಕ್ಷಕರು ಆತನ ತಲೆಗೆ ಕುಟುಕಿ ಹೇಳಿದರು ‘‘ಅದೆಲ್ಲ ಹಾಗೋಲ್ಲ...’’
ಕಾಸಿಗೆ ಪಿಕಲಾಟಕ್ಕಿಟ್ಟುಕೊಂಡಿತು ‘‘ಸಂವಿಧಾನದ ಮೇಲೆ ಆಣೆ ಹಾಕಲಾ?’’ ಮುಗ್ಧವಾಗಿ ಕೇಳಿದ.
‘‘ಅದೂ ಆಗಲ್ಲ. ಮಂಜುನಾಥನ ಮೇಲೆ ಆಣೆ ಹಾಕ್ಬೇಕು...’’
ಕಾಸಿ ‘‘ಮಂಜುನಾಥ್ ಯಾರವ್ರ?’’ ಎಂದು ಗೊಂದಲದಿಂದ ಕೇಳಿದ.
‘‘ಅವ್ರೇ ಕಣ್ರೀ...ನೀವು ಪತ್ರಿಕೆಗಳಲ್ಲಿ ಜಾಹೀರಾತು ನೋಡಿಲ್ವ? ಧರ್ಮಸ್ಥಳದ ಮಂಜುನಾಥ ಸ್ವಾಮಿ...ಆಣೆ ಮಾಡ್ತೀರಾ?’’
‘‘ಮಾಡ್ತೀನಿ ಕಣ್ರೀ...ಒಳಗೆ ಬಿಡ್ರಿ....’’ ಎಂದವನೇ ಕಾಸಿ ಒಳ ನುಗ್ಗಿದ. ಅಲ್ಲಿ ಯಡಿಯೂರಪ್ಪ ತನ್ನ ಸಚಿವರಲ್ಲಿ ಕೇಳುತ್ತಾ ಇದ್ದರು ‘‘ಹೇಳಿ...ಮಂಜುನಾಥನ ಮೇಲೆ ನನ್ನ ಪರವಾಗಿ ಯಾರು ಆಣೆ ಹಾಕ್ತೀರಿ? ಈಗ ಮರ್ಯಾದೆಯ ಪ್ರಶ್ನೆ. ಸವಾಲು ಹಾಕಿಯಾಗಿದೆ. ಕುಮಾರಸ್ವಾಮಿ ದಿನ ನಿಗದಿ ಮಾಡಿದ್ದಾರೆ. ನನ್ನ ಪರವಾಗಿ ಆಣೆ ಹಾಕ್ತೀರೇನ್ರಿ ರೇಣುಕಾಚಾರ್ಯ ಅವರೇ?’’
ರೇಣುಕಾಚಾರ್ಯ ನಿಂತಲ್ಲೇ ತೂರಾಡಿದರು.

‘‘ಸಾರ್...ನಾನು ನಿಮ್ಮ ಪಿಚ್ಚರ್ ತೆಗೀತಾ ಇದ್ದೇನೆ ಸಾರ್. ಏನಾದರೂ ತೊಂದರೆಯಾದರೆ ಪಿಚ್ಚರ್ ಅರ್ಧದಲ್ಲಿ ನಿಲ್ಲುತ್ತೆ ಸಾರ್...ಪಿಚ್ಚರ್‌ನಲ್ಲಿ ‘‘ಆಣೆ ಆಣೆ ನನ್ನಾಣೆ...ಧರ್ಮಸ್ಥಳದಾಣೆ’’ ಎಂಬ ಒಂದು ಸಾಂಗ್‌ನಲ್ಲಿ ನೀವು ಡ್ಯಾನ್ಸ್ ಮಾಡೋ ಒಂದು ಸೀನ್ ಇದೆ ಸಾರ್....ನೀವು ಆಣೆ ಮಾಡ್ತಾ ಇರೋವಾಗ ದೇವೇಗೌಡರ ತಲೆ ಡಬಡಬಾಂತ ಪುಡಿಯಾಗುತ್ತೆ ಸಾರ್....ಸಾರ್ ಪ್ಲೀಸ್ ಸಾರ್....’’

ಗೃಹ ಸಚಿವ ಅಶೋಕ್ ಅವರು ಅದೆಲ್ಲೋ ಮುಖ ಮಾಡಿ ನಿಂತಿದ್ದರು. ‘‘ಏನ್ರೀ ಅಶೋಕ್ ನೀವು ಹೋಗ್ತೀರಾ....?’’ ಯಡಿಯೂರಪ್ಪರು ಕೇಳುತ್ತಿದ್ದಂತೆಯೇ ‘‘ಆಣೆ ಗೀಣೆಯಲ್ಲೆಲ್ಲ ನನಗೆ ನಂಬಿಕೆಯಿಲ್ಲ ಸಾರ್. ದೇವರಲ್ಲೂ ನಂಬಿಕೆಯಿಲ್ಲ. ಸುಮ್‌ಸುಮ್ನೆ ಹೋಗಿ ಆಣೆ ಹಾಕಿದರೆ ಸರಕಾರ ಬಿದ್ದು ಬಿಡಬಹುದು ಸಾರ್... ನಂಬಿಕೆಯಿಲ್ಲದವ ರೆಲ್ಲ ಅಲ್ಲಿಗೆ ಹೋಗಬಾರದು ಸಾರ್...’’ ಎಂದು ಹೇಳಿದವರು ಮನದಲ್ಲೇ ‘ಕಾಪಾಡು ಮಂಜುನಾಥ’ ಎಂದು ಪಠಿಸತೊಡಗಿದರು.ಯಡಿಯೂರಪ್ಪ ಚಿಂತೆಗೊಳಗಾದರು. ‘‘ನೋಡ್ರೀ...ಈಗ ಕುಮಾರಸ್ವಾಮಿ ಆಣೆ ಮಾಡೋದಕ್ಕೆ ಬರೋದು ಕನ್‌ಫರ್ಮ್ ಆಗಿದೆ. ನಾನು ಆ ದಿನ ತುಂಬಾ ಬ್ಯುಸಿಯಾಗಿದ್ದೇನೆ. ಮುಖ್ಯವಾಗಿ ನೆರೆ ಪರಿಹಾರ, ಕೆರೆ ಪರಿಹಾರ... ಇತ್ಯಾದಿ ಇತ್ಯಾದಿ ಯೋಜನೆಗಳ ಉದ್ಘಾಟನೆಗಳಿವೆ. ಕರ್ನಾಟಕದ ಅಭಿವೃದ್ಧಿ ನನ್ನ ಗುರಿಯಾಗಿರುವುದರಿಂದ ಅವತ್ತು ನಾನು ಹೋದರೆ ಚೆನ್ನಾಗಿರುವುದಿಲ್ಲ. ಯಾರಾದರೂ ಹೋಗ್ತೀರೇನ್ರಿ...’’

ಈಶ್ವರಪ್ಪ ಅದಾವುದೋ ಕಡತ ನೋಡು ವುದರಲ್ಲಿ ಮಗ್ನರಾದವರಂತೆ ನಟಿಸತೊಡಗಿ ದರು. ಅಷ್ಟರಲ್ಲಿ ರೇಣುಕಾಚಾರ್ಯರು ಸಲಹೆ ನೀಡಿದರು ‘‘ಸಾರ್...ರೆಡ್ಡಿ ಸಹೋದರ ರನ್ನು ಕಲಿಸೋಣ ಸಾರ್...ಆಣೆ ಹಾಕಿದಾಕ್ಷಣ ಅವರ ತಲೆ ಒಡೆದು ಚೂರಾಗುತ್ತೆ. ಆರೋಪ ಮಂಜುನಾಥನ ಮೇಲೆ ಬೀಳುತ್ತೆ. ನಮ್ಮ ಸರಕಾರಕ್ಕೂ ಕಾಟ ತಪ್ಪಿದ ಹಾಗಾಗುತ್ತೆ’’
‘‘ಉಪಾಯ ಚೆನ್ನಾಗಿದೆ. ಆದ್ರೆ ಅವರೇಕೆ ಹೋಗುತ್ತಾರೆ? ವರ್ತೂರು ಪ್ರಕಾಶ್‌ರನ್ನು ಕಲಿಸೋಣ’’ ಯಡಿಯೂರಪ್ಪ ಹೇಳಿದರು. ಬಿಜೆಪಿಯ ಸಚಿವಾಕಾಂಕ್ಷಿಗಳೆಲ್ಲ ಒಕ್ಕೊರಲಲ್ಲಿ ಅನುಮೋದಿಸಿದರು. ಆದರೆ ವರ್ತೂರು ಅಳತೊಡಗಿದರು ‘‘ಸಾರ್...ನನಗೆ ಸಚಿವ ಸ್ಥಾನ ಕೊಡದೇ ಇದ್ದರೂ ಪರವಾಗಿಲ್ಲ... ನನ್ನನ್ನು ನನ್ನಷ್ಟಕ್ಕೆ ಬದುಕುವುದಕ್ಕೆ ಬಿಡಿ ಸಾರ್...’’

ಯಡಿಯೂರಪ್ಪ ಸಮಾಧಾನಿಸಿದರು ‘‘ವರ್ತೂರು ಅವರೇ, ಸರಕಾರ ಬೀಳೋವಾಗ ನೀವೇ ನಮ್ಮನ್ನು ಕಾಪಾಡಿದ್ರಿ. ಈಗ್ಲೂ ನಮ್ಮ ಸರಕಾರ ನಿಮ್ಮ ಕೈಯಲ್ಲೇ ಇದೆ. ನಿಮಗೇನೂ ಆಗಲ್ಲ...ನಾನು ಭರವಸೆ ಕೊಡ್ತೀನಿ. ಧರ್ಮಸ್ಥಳಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದೇನೆ. ಅಷ್ಟೇ ಅಲ್ಲ, ಆಣೆ ಮಾಡಿ ಏನೂ ಅನಾಹುತ ಆಗದಿದ್ದಲ್ಲಿ ಇನ್ನಷ್ಟು ಹಣ ಬಿಡುಗಡೆ ಮಾಡುತ್ತೇನೆ ಅಂತಹ ಡೀಲ್ ಮಾಡಿದ್ದೇನೆ ಕಣ್ರೀ....ನೀವು ನನ್ನ ಕಡೆ ಇದ್ದ ಹಾಗೆಯೇ ಮಂಜುನಾಥ ಕೂಡ ನನ್ನ ಕಡೆ ಇದ್ದಾನೆ ಕಣ್ರೀ...’’

ವರ್ತೂರು ಗಡ್ಡ ಕೆರೆಯುತ್ತಾ ಹೇಳಿದರು ‘‘ಸಾರ್...ಈ ಸಾಬ್ರುಗೆಲ್ಲ ಆಣೆ ಮೇಲೆ ನಂಬಿಕೆ ಇರಾಕಿಲ್ಲ...ನಮ್ಮ ಮುಮ್ತಾಜ್ ಖಾನ್ ಅವರನ್ನು ಕಳುಹಿಸಿದ್ರೆ ಹೇಗೆ...?’’
ಯಡಿಯೂರಪ್ಪ ಸಿಟ್ಟಾದರು ‘‘ಈಗಾಗಲೇ ಚರ್ಚ್ ದಾಳಿಯಿಂದ ನಿಟ್ಟುಸಿರು ಬಿಟ್ಟಿದ್ದೇನೆ. ಇನ್ನು ಈ ಸಾಬಿಯನ್ನು ಅಲ್ಲಿಗೆ ಕಳುಹಿಸಿ ಅಲ್ಲೇನಾದ್ರು ಆದ್ರೆ ಮುಸಲರು ದಂಗೆ ಎದ್ದು ಬಿಟ್ಟಾರು. ಕೋಮುಗಲಭೆಯಾದೀತು ಕಣ್ರೀ...’’
‘‘ಸಾರ್ ಶೋಭಾನ್ನ ಕಳಿಸೋಣ ಸಾರ್... ಹೆಣ್ಣು ಮಗಳು... ಜೊತೆಗೆ ಧರ್ಮಸ್ಥಳಕ್ಕೆ ಸಮೀಪದ ಪುತ್ತೂರಿನವರು...ಅವರಿಗೇನು ಆಗಾಕಿಲ್ಲ...’’ ಯಾರೋ ಗುಂಪಿನ ನಡುವಿನಿಂದ ಹೇಳಿದರು.
ಯಡಿಯೂರಪ್ಪ ಒಮ್ಮೆಲೆ ಕೆಂಡವಾದರು ‘‘ನನ್ನ ಮಕ್ಕಳನ್ನಾದರೂ ಕಳುಹಿಸುತ್ತೇನೆ. ಆದರೆ ಶೋಭಾನ್ನ ಕಳುಹಿಸೋಲ್ಲ...’’
ಯಡಿಯೂರಪ್ಪರ ಸುಪುತ್ರ ರಾಘವೇಂದ್ರ ಅಳುತ್ತಾ ‘‘ಅಪ್ಪಾ ನಾನು ಹೋಗಾಕಿಲ್ಲ’’ ಎಂದ.

Friday, May 13, 2011

ಕನ್ನಡ ಚಾನೆಲ್ ಸಮರ ನಡೆಯಲಿದೆ ನಿರಂತರ

ಗೋಕಾಕದ ಗೆಳೆಯ ಮಾಜಿ ಸಚಿವ ಸತೀಶ್ ಜಾರಕಿ ಹೋಳಿ ಆರಂಭಿಸಿದ ಸಮಯ ಟಿವಿ ಮಾರಾಟ ಆಗಿರುವುದು ಹಳೆ ಸುದ್ದಿ. ಹೊಸ ಸಮಾಚಾರ ಎಂದರೆ ಸಮಯ ಟಿವಿ ಟಿ ಅರ ಪಿ ಜಂಪ್ ಆಗಿದೆ. ಇದು ರೆಸ್ಟ್ ಆಫ ಕರ್ನಾಟಕ ದಲ್ಲಿ ಸಮಯ ಟಿವಿ ಸುವರ್ಣ ನ್ಯೂಸ್ 24x7 ಹಿಂದೆ ಹಾಕಿದೆ. ಟಿಆರ್ ಪಿ ಗೆ ಬೆಂಗಳೂರು ಪರಮುಖ ಕೇಂದ್ರ. ಆದರೆ ಅಸ್ತೆ ಪ್ರಮುಖ ಕೇಂದ್ರ ಗ್ರಾಮೀಣ ಕರ್ನಾಟಕ ಅಥವಾ ಜಿಲ್ಲ ಕೇಂದ್ರಗಳು. ಟಿಆರ್ಪಿ ಗೆ ಮೈಸೂರು , ಮಂಗಳೂರು, ಧಾರವಾಡ, ರಾಯಚೂರು, ಬೆಳಗಾವಿ, ಗುಲಬರ್ಗ,ಹಾಸನ,ಶಿವಮೊಗ್ಗ ಪ್ರಮುಖ ಅಳತೆ ಕೇಂದ್ರಗಳು.

ಸುವರ್ಣ ನ್ಯೂಸ್ ಇದೊಂದು ಹಿನ್ನಡೆ. ಕ್ಯಾಪ್ಟನ್ ರಂಗಣ್ಣ ಬಿಟ್ಟ ಅನಂತರ ಟಿವಿ ನೋಡುವವರ ಸಂಖ್ಯೆ ಕಡಿಮೆ ಆಗಿದೆ. ಅನಂತರ ರಾಜಕೀಯ ವಿಭಾಗದ ವರದಿಗಾರಾದ ಸುಭಾಷ್ ಹುಗಾರ್ ಮತ್ತು ರವಿರಾಜ ವಳಲಂಬೆ ರಾಜಿನಾಮೆ ನೀಡಿದ್ದಾರೆ. ಅವರೊಂದಿಗೆ ಕೀರ್ತಿ ಶಂಕರಘಟ್ಟ ಎಂಬ ಹುಡುಗ ಕೂಡ ಸುವರ್ಣ ಬಿಟ್ಟಿದ್ದಾನೆ. ಭಯಾನಕ ವಾಗಿ ಅಬ್ರಕಬ್ರ ಮಾಡುತಿದ್ದ. ಇತನಿಗೆ ಎಲ್ಲವು ಸರಿಯಾಗುವುದಿಲ್ಲ. ಶಂಕರಘಟ್ಟ ಇದು ಎರದನೆ ಸಲ ಸುವರ್ಣ ಬಿಡುವುದು. ಈಗ ಯಾವುದು ಆಫ್ ಎಂ ಚಾನಲ್ ಸೇರಿದ್ದಾನೆ. ಅಂತರ್ಮುಖಿ ಹುಡುಗನಿಗೆ ಸ್ವಲ್ಪ ಜನೋದಯವಾದರೆ ಯಾವುದೇ ಮಿಡಿಯಾ ಕಂಪನಿಗೆ ಉತ್ತಮ ಅಸ್ತಿ.
ಸಮಯ ಸೇಲ್ ಆದ ಅನಂತ ಶಶಿಧರ ಭಟ್ಟರನ್ನು ಚೇಂಜ್ ಮಾಡಿ ಸಂಪೂರ್ಣ ಅಧ್ಯತ್ಮಿಖ, ಭಾರತಿಯ ಸಂಸ್ಕೃತಿ, ಋಷಿ ಮುಂಗಳ, ಮಟ ಮಾನ್ಯ ಟಿವಿ ಚಾನಲ್ ಮಾಡಲು ಯಡ್ಡಿ ಕಂಪನಿ ಆಲೋಚಿಸಿದೆ. ಆದರೆ ಭಟ್ಟರು ಹೋಗುಥಿಲ್ಲ. ಅಬದರ ಬದಲು ಜೋತಿಷ್ಯ ಟಚ್ ನೀಡುತಿದ್ದಾರೆ.ಉದಯ ಟಿವಿ ಈಗಲೂ ರಾಜ್ಯದಲ್ಲಿ ನಂಬರ್ ಒನ್. ಈ ಟಿವಿ ಕಥೆ ಇಗ ಬೇಡ ಇದು ಸಂಪೂರ್ಣ ನೆಲಕಚ್ಚಿದೆ. ನ್ಯೂಸ್ ಟಿ ಅರ ಪಿ ಬಿಡಿ ಈ ಟಿವಿ ಯಲ್ಲಿ ಬಂದ ಸುದ್ದಿ ಬಗ್ಗೆ ಮಾತನಾಡುವವರೇ ಇಲ್ಲ ಇನ್ನು TRP ಎಲ್ಲಿಂದ ಬರಬೇಕು ಸ್ವಾಮೀ ? ಮುಂದೆ ನೋಡಬೇಕು.

Thursday, May 5, 2011

ಇದು ಮಾಧ್ಯಮ ಬದಲಾವಣೆ ಪರ್ವ ಕಾಲ

ಇದು ಮಾಧ್ಯಮ ಬದಲಾವಣೆ ಪರ್ವ ಕಾಲ. ರಂಗ ಮತ್ತು ರವಿ ಕಪ್ರದಿಂದ ಸುವರ್ಣಗೆ ಹೋದರು. ಚಾರ್ಮ್ ಕಳಕೊಂಡಿದ್ದ ಶಶಿಧರ ಭಟ್ಟರು ಹೊರಬಿದ್ದರು. ಕೆಲವೇ ತಿಂಗಳಲ್ಲಿ ಈ ಟೀವಿಯಾ ರಾಮೋಜಿ ರಾವ್ ಅವರ ಕೆಂಪು ಕಣ್ಣಿನ ಹುಡುಗ ಕೂಡ ಅಲ್ಲಿಂದ ಹೊರಬಂದರು.
ಸುವರ್ಣ ನ್ಯೂಸ್ ಬಕೆಟ್ ಕಥೆ ನಿಮಗೆ ಗೊತ್ಹಿದೆ. ರಂಗ ರವಿ ಕಥೆ ಗೊತ್ಹಿದೆ. ಆಮೇಲೆ ವಿ ಭಟ್ಟರು ವಿಕ ಬಿಟ್ಟರು. ಶಶಿಧರ ಭಟ್ಟರು ಸಮಯ ಸೇರಿದರು. ಸಮಯ ಸೇಲ್ ಆಗಿದ್ದು ಯಾವಾಗ ಅಲ್ಲಿಂದ ಹೊರಬೀಳುತ್ತಾರೆ ನೋಡಬೇಕು. ಪ್ರಜಾವಾಣಿಯಲ್ಲಿ ಅತೀ ಹೆಚ್ಚು ವರ್ಗಾವಣೆ ಅಗೀದೆ. ದಂಡಾವತಿ ಈಗ ಕಾರ್ಯಕಾರಿ ಸಂಪಾದಕ. ಗೇಮ್ expert ಗೋಪಾಲ ಆ ಸ್ಥಾನಕ್ಕೆ ಬಂದಿದ್ದಾರೆ. ದಿನೇಶ್ ಅಮೀನ್ ಮಟ್ಟು ತಮ್ಮ ಟೀಕಾ ಪ್ರಹಾರ ಮುಂದುವರಿಸಿದ್ದಾರೆ.
ಇಂಗ್ಲೀಷ್ ಗೆ ಬರೋಣ ಬಲರಾಮ್, ಕಾಮತ್, ರವಿ ಜೋಷಿ ಹೊಸ ಕಡೆಗೆ ಹೋದರು. ಮುಖ್ಯಮಂತ್ರಿಯ ಆಪ್ತ ವಲಯದ ಶಿವಮೊಗ್ಗದ ಅರುಣ್ ಪ್ರಶಸ್ತಿ ಮಾತ್ರ ಅಲ್ಲದೆ ಎಕ್ಷ ಪ್ರೆಸ್ ಸಂಪಾದಕ ಕೂಡ ಆಗಿ ಡಬ್ಬಲ್ ಲಾಟರಿ ಹೊಡೆದರು. ಅಲ್ಲಿರುವ ಪ್ರತಿಭಾವಂತ ಹುಡುಗ ರಾಜಶೇಖರನಿಗೆ ಯಾಕೋ ಕಿರಿ ಕಿರಿ.
ಮುಂದಿನ ದಿನಗಳಲ್ಲಿ ಸುವರ್ಣ ನ್ಯೂಸ್ ಹೊಸ ಮುಖ ಬರಲಿದ್ದಾರೆ.ಬಲರಾಮ್ ಹೊಸ ಟೀಂ ಕಟ್ಟಲಿದ್ದಾರೆ. ಸಮಯದಲ್ಲಿ ಕೂಡ ಎಡಪಂಥಿಯರು ಹೊರನಡೆದು ಬಳಪಂಥಿಯರಿಗೆ ಅವಕಾಶ ನೀಡಲಿದ್ದಾರೆ. ವಿಜಯ್ ಸಂಕೇಶ್ವರ್ ಅವರ ಹೊಸ ಪೇಪರ್ ಶೀಘ್ರ ಬರಲಿದೆ. ರಾಜ್ ಟೀವಿ ಬರಲಿದೆ. ಏನ್ ಡಿ ಟೀವಿ,p7 ಚಾನೆಲ್ಲುಗಳು ಬರಲಿದೆ. ಉದಯಕ್ಕೆ ಹೊಸ ಆಡಳಿತ ಸಾರಥಿ ಬರಲಿದ್ದಾನೆ.ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ಟಿವಿ ಕನ್ನಡ ನ್ಯೂಸ್ ಮುಖ್ಯಸ್ಥ ಜಗದೀಶ ಮಣಿಯಾನಿಯ ಲೈಂಗಿಕ ಕಿರುಕುಳಗಳಿಂದ ಅನೇಕರು ಕೆಲಸ ಬಿಟ್ಟು ಬೇರೆ ಚಾನೆಲ್ ಗಳಿಗೆ ತೆರಳಿದ್ದಾರೆ.ಇನ್ನೂ ಹೋಗುವರಿದ್ದಾರೆ. ಈಗಾಗಲೇ ಕಳಪೆ ಪ್ರದರ್ಶನ ನೀಡುತ್ತಿರುವ ಈ ಟೀವಿ ಕನ್ನಡ ನ್ಯೂಸ್ ಸೆಕ್ಷನ್ ಬಂದ್ ಆಗಲಿದೆ ಅಥವಾ ಬೇರೆಯವರಿಗೆ ಕೊಡುವ ಅಂದರೆ outsource ಸಾಧ್ಯತೆ ಕೂಡ ಇದೆ. ಮಿಡ್ ಡೇ ರೀ ಲಾಂಚ್ ಆಗಲಿದೆ.
ಅನೇಕ ತಲೆಗಳು ಉರುಳಲಿವೆ ಅಥವಾ ಹಾoಡ್ಸ್ ಹೋಗಲಿವೆ. ಹಲವರು ವೃತ್ತಿ ಬಿಡಲಿದ್ದಾರೆ, ಬಿಡುತಿದ್ದಾರೆ. ಅಂತು ಇದು ಸಂಪಾದಕರಿಗೆ ಪತ್ರಕರ್ತರಿಗೆ ಒಳ್ಳೆ ಕಾಲ.
ಕೃಪೆ:Mediablog.blog

Monday, May 2, 2011

ಪತ್ರಕರ್ತ ರ ಸಂಪುಟ- ರಂಪಾಟ

ಒಂದು ವೇಳೆ ಪತ್ರಕರ್ತರೆಲ್ಲ ಸೇರಿ ಒಂದು ಸರಕಾರ ರಚಿಸಿದರೆ ಯಾರ‍್ಯಾರಿಗೆ ಯಾವ ಯಾವ ಸಚಿವ ಸ್ಥಾನ ದೊರೆಯಬಹುದು? ಓದಿ, ಹೊಟ್ಟೆ ತುಂಬಾ ನಕ್ಕು ಬಿಡಿ.

ವಿಶ್ವೇಶ್ವರ ಭಟ್: ಮುಖ್ಯಮಂತ್ರಿ (ಮಾಹಿತಿ ತಂತ್ರಜ್ಞಾನ, ಶಿಕ್ಷಣ ವಿತ್ತ)
ರಂಗನಾಥ್ ಎಚ್.ಆರ್.: ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ (ಈಗ ಖಾತೆ ರಹಿತ)
ಕುಮಾರನಾಥ (ಮಂಗಳೂರು ವಿಕ) :ಗೃಹ ಮತ್ತು ಅಬಕಾರಿ(ಮನೆಯಿಂದಲೇ ಕಾರ್ಯಾಚರಣೆ) ಇಲಾಖೆ ಸಹಾಯಕ ಸಚಿವ
ರವಿ ಬೆಳಗೆರೆ: ಸಹಾಯಕಶಿಕ್ಷಣ ಮತ್ತು ಅಪಹರಣ, ಗಣಿ ಮತ್ತು ಭೂವಿಜ್ಞಾನ
ದು.ಗು.ಲಕ್ಷ್ಮಣ್: ಮುಜರಾಯಿ
ಕೆ.ಎನ್.ಶಾಂತಕುಮಾರ್: ಕ್ರೀಡೆ
ಪದ್ಮರಾಜ ದಂಡಾವತಿ: ಲೋಕೋಪಯೋಗಿ
ಇ.ರಾಘವನ್: ಹಣಕಾಸು, ಕಂದಾಯ
ರಾಧಾಕೃಷ್ಣ ಬಡ್ತಿ: ನೀರಾವರಿ
ಲಕ್ಷ್ಮಣ ಕೊಡಸೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಜಿ.ಎನ್.ಮೋಹನ್: ಒಳಾಡಳಿತ, ಗುಪ್ತಚರ ಇಲಾಖೆ
ಅಶೋಕ್ ರಾಮ್: ಚರಂಡಿ ಮತ್ತು ಒಳಚರಂಡಿ ಮಂಡಳಿ
ಸಂಧ್ಯಾ ಪೈ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಿರಾಶ್ರಿತರ ಪುನರ್ವಸತಿ
ಗಿರೀಶ್ ರಾವ್ (ಜೋಗಿ): ಗ್ರಂಥಾಲಯ
ಜಯಪ್ರಕಾಶ್ ನಾರಾಯಣ : ಸಹಾಯಕ ಗುಪ್ತ ಚರ ಇಲಾಖೆ
ಪಿ.ತ್ಯಾಗರಾಜ್: ಇಂಧನ
ಕನ್ನಡಪ್ರಭ ಡಾ ವೆಂಕಿ: ವೈದ್ಯಕೀಯ ಶಿಕ್ಷಣ
ಕರಾವಳಿ ಅಲೆ ಸೀತಾರಾಂ: ಕಾರಾಗೃಹ
ರವಿ ಹೆಗಡೆ: ವಿಜ್ಞಾನ ಮತ್ತು ತಂತ್ರಜ್ಞಾನ
ಇಂದ್ರಜಿತ್ ಲಂಕೇಶ್: ಯುವಜನ ಸೇವೆ
ತುಫೈಲ್ ಮೊಹಮ್ಮದ್: ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ
ಗಂಗಾಧರ ಮೊದಲಿಯಾರ್: ವಾರ್ತಾ ಮತ್ತು ಪ್ರಚಾರ
ಪ್ರತಾಪ್ ಸಿಂಹ: ಪಂಚ ವಾರ್ಷಿಕ ಯೋಜನೆ
ಡಾ. ಆರ್.ಪೂರ್ಣಿಮ: ಮಕ್ಕಳ ಕಲ್ಯಾಣ
ಲಕ್ಷ್ಮಣ ಹೂಗಾರ್: ಸಮಾಜ ಕಲ್ಯಾಣ
ಶಿವಸುಬ್ರಹ್ಮಣ್ಯ: ಅರಣ್ಯ
ಲೋಕೇಶ್ ಕಾಯರ್ಗ : ಕಾರ್ಮಿಕ
ಅರವಿಂದ ನಾವಡ: ರೇಷ್ಮೆ
ದೀಪಕ್ ತಿಮ್ಮಯ ಮತ್ತು ರಾಧಿಕಾ ಭಾರದ್ವಾಜ್: ವಯಸ್ಕರ ಶಿಕ್ಷಣ
ತಿಮ್ಮಪ್ಪ ಭಟ್: ಸಣ್ಣ ಉಳಿತಾಯ್
ಜಗದೀಶ ಮನಿಯಾಣಿ ಈ ಟಿವಿ ಕನ್ನಡ :ಮಹಿಳಾ ಕಲ್ಯಾಣ(ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಸ್ವಾಮೀ ಇವರಿಗೆ..!)
ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಒದಗಿಸಲಾಗುವುದು.ಮಾಹಿತಿ ಇದ್ದರೆ ಕಳಿಸಿ

Wednesday, April 27, 2011

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ನ ಕೊಳಕು ಮುಖಗಳು


ಮೊನ್ನೆ ಮೊನ್ನೆವರೆಗೂ ಆಂಗ್ಲ,ಹಿಂದಿ ವಾಹಿನಿಗಳಲ್ಲಿ ಮಾತ್ರ ನೊಡ್ತಾ ಇದ್ದಂತಹ ಈ ಹೊಲಸು ರೀಯಾಲಿಟಿ ಶೋ ಗಳು ಕನ್ನಡದ ವಾಹಿನಿಗಳಿಗೂ ಕಾಲಿರಿಸಿ ವರ್ಷಗಳೇ ಸಂದಿವೆ.ಇಂತಹ ಶೋ ಗಳ ನಿಜವಾದ ಬಣ್ಣ ಇದೀಗ ಬಯಲಾಗುತ್ತಿದೆ.ಯಾವ ರೀತಿಯ ರೀಯಾಲಿಟಿ ಶೋಗಳ ಹೆಸರಿನಲ್ಲಿ ಅಮಾಯಕರ ಅದರಲ್ಲೂ ಹದಿಹರೆಯದ ಹುಡುಗಿಯರನ್ನು ಶೋಷಣೆ ಮಾಡುತ್ತಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಸುವರ್ಣ ಚಾನೆಲ್ಲಿನ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಕಾರ್ಯಕ್ರಮ. ಕೇವಲ ಟಿಆರ್ ಪಿ ಮಾತ್ರ ಇಲ್ಲಿ ಕೆಲಸ ಮಾಡುತ್ತಿಲ್ಲ ಸ್ವಾಮೀ.ನಮಗೆ ಅರ್ಥತ್ ವೀಕ್ಷಕರಿಗೆ ಮೂರ್ಖರ ಪೆಟ್ಟಿಗೆಯಲ್ಲಿ ಎಡಿಟಿಂಗ್ ಆಗಿ ಇಷ್ಟು ಕಂಡರೆ,ಇನ್ನೂ ಒರಿಜಿನಲ್ ಕ್ಯಾಸೆಟ್ಟಿನಲ್ಲಿ ಏನ್ ಉಂಟು,ಏನಿಲ್ಲ ಸ್ವಾಮೀ? ಏನ್ ಇದೆ ಏನ್ ಇಲ್ಲಾ ಎಂದು ಕೇವಲ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಅವರುಗಳಿಗೇ ಗೊತ್ತು!ಇದು ಕೇವಲ ಸುವರ್ಣಾ ಚಾನೆಲ್ಲಿಗೇ ಮಾತ್ರ ಸೀಮಿತ ವಾಗಿಲ್ಲ.ಈ ವಿಷಯದಲ್ಲಿ ಎಲ್ಲಾ ಚಾನೆಲ್ಲಿನವರೂ ಸಮಾನ ಮನಸ್ಕರೇ..ಹಂಚಿ ತಿನ್ನುವ ಚಾಳಿ ಬೆಳೆಸಿದ್ದರಿಂದ ಇಂತಹ ಸೂಕ್ಷ್ಮ ವಿಷಯಗಳು ಹೊರ ಜಗತ್ತಿಗೇ ಬರಲ್ಲ.ಒಂದಷ್ಟು ದುಡ್ಡು,ಹೆಸರುಗಳಿಸಲು ಇಂತಹ ಕಾರ್ಯಕ್ರಮಗಳಿಗೆ ಸಹಿ ಹಾಕುವ ಹದಿಹರೆಯದ ಹುಡ್ಗಿರು ಶೋಗಳಲ್ಲಿ ಉಳಿಯಬೇಕಾದರೇ ಮಾನ ಬಿಟ್ಟು ಎಲ್ಲದಕ್ಕೂ ಸೈ ಎನ್ನಬೇಕು.'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ನ ರೀಯಾಲಿಟಿ ಶೋ ನ ಸ್ಪರ್ಧಿ ಅಕ್ಷತಾ ಮಾತ್ರ ಇಲ್ಲಿ ಕೊಂಚ ದಿಟ್ಟತನ ತೋರಿ ಹೊರಬಂದು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಮೇಲಾದ ಹಿಂಸೆ, ದೌರ್ಜನ್ಯಗಳ ಬಗ್ಗೆ ಮಹಿಳಾ ಆಯೋಗಕ್ಕೂ ದೂರಿತ್ತಳು.ಇವಳ ಧೈರ್ಯವನ್ನು ನಾವುಗಳು ಮೆಚ್ಚಲೇ ಬೇಕು ಮತ್ತು ಅವಳ ಮುಂದಿನ ಹೋರಾಟಕ್ಕೆ ಬೆಂಬಲ ನೀಡಬೇಕು.ಆದರೆ ಅವರು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತಾಳೆ ಎಂಬುಂದು ಕಾದು ನೋಡಬೇಕಿದೆ. ಕಾಣದ ಕೈಗಳು ಅವಳು ಮತ್ತು ಅವಳ ಕುಟುಂಬದವರನ್ನು ಸುಮ್ಮನೆ ಕೂರಲು ಬಿಡಕ್ಕಿಲ್ಲ.

Thursday, April 14, 2011

ಉಳಿದ ಚಾನೆಲ್ಲೂಗಳ ಭರಾಟೆಯಲ್ಲಿ ಈ ಟಿವಿ ಮಂಕಾಯಿತೇ ?


ಆಂಧ್ರದ ತೆಲುಗು ಮೂಲದ ಈ-ಟಿವಿ ಕನ್ನಡ ಕುರಿತು ಒಂದು ಕಾಲಕ್ಕೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದವು. ಮುಕ್ತ, ಗುಪ್ತಗಾಮಿನಿ ಧಾರಾವಾಹಿಗಳಿಂದ ಮೊದಲ್ಗೊಂಡು ಎದೆ ತುಂಬಿ ಹಾಡುವೆನು ಸಂಗೀತ ಕಾರ್ಯಕ್ರಮ ಮತ್ತು ದೈನಂದಿನ ಸುದ್ದಿಯವರೆಗೆ ಹಲವು ವಿಶಿಷ್ಟ ಕಾರ್ಯಕ್ರಮಗಳು ಜನರ ಮನಸೂರೆಗೊಂಡಿದ್ದವು. ಆದರೆ ಸುವರ್ಣ, ಜೀ ಕನ್ನಡ ಮತ್ತು ಕಸ್ತೂರಿ, ಟಿವಿ9 ವಾಹಿನಿಗಳ ಆಕ್ರಮಣಕಾರೀ ಶೈಲಿಯ ಕಾರ್ಯಕ್ರಮಗಳಿಂದಾಗಿ ಈ-ಟಿವಿ ಕೊಂಚ ಮಂಕಾದಂತೆ ಕಾಣುತ್ತಿದೆ. ಒಂದು ಕಡೆ ಕಳಪೆ ಮತ್ತು ವಿಕ್ಷಕರನ್ನು ಹಿಡಿದಿಟ್ಟುಕೊಳ್ಳಲಾಗದ ಟೀವಿ ನಿರೂಪಕರು ಮತ್ತು ಶೋಗಳು ವಿಫಲವಾಗುತ್ತಿವೆ. ಈ ಟಿವಿ ಮೂಲ ರೂವಾರಿ ಕರ್ನಾಟಕದ ವ್ಯವಸ್ಥಾಪಕ ಸುಬ್ಬಯ್ಯ ನಾಯ್ಡು. ಅವರು ಕಳೆದ ದಶಕದಿಂದ ಚಾನೆಲ್ಲನ್ನು ಕಟ್ಟಿ ಬೆಳೆಸಿದ್ದಾರೆ ಎಂದರೆ ತಪ್ಪಾಗಲಾರದು.ಈ ಟಿವಿ ಜನಪ್ರಿಯತೆ ಹೆಚ್ಚಿಸುವ ನಿಟ್ಟಿನಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ತುಂಬಾ ಸಹಾಯಕಾರಿಯಾಗಿತ್ತು. ಸ್ಪರ್ಧಿಗಳಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂರವರು ನೀಡುತ್ತಿದ್ದ ಸಾಂದರ್ಭಿಕ ಸಲಹೆ, ಹಾಸ್ಯ, ಉತ್ತೇಜನಗಳು ವೀಕ್ಷಕರಿಗೆ ಇಂದಿಗೂ ಇಷ್ಟವಾಗುತ್ತಿವೆ. ಈ ಟಿವಿ ಗೆ ಪರ್ಯಾಯವಾಗಿ ಸುವರ್ಣ ವಾಹಿನಿಯಲ್ಲಿ ಹಾಗೂ ಜೀ ಕನ್ನಡ, ಕಸ್ತೂರಿ ವಾಹಿನಿಗಳಲ್ಲಿ ಅನೇಕ ಕಾರ್ಯಕ್ರಮಗಳು ಬಂದವು ಮಾತ್ರವಲ್ಲ ವೀಕ್ಷಕವೃಂದವನ್ನೂ ತನ್ನತ್ತ ಸೆಳೆಯುವಲ್ಲಿ ಸಫಲವಾದುವು ಎಂಬ ಮಾತು ಸತ್ಯ. ಆದರೆ ಇದನ್ನು ತನ್ನ ಗುಣಾತ್ಮಕ ಕಾರ್ಯಕ್ರಮಗಳ ಮೂಲಕವೇ ಎದುರಿಸಬೇಕಿದ್ದ ಈ-ಟಿವಿ ತಾನೂ ಸಹ ಕೊಂಚ ಹೊರಳುದಾರಿ ತುಳಿದಿದೆ. ಅಪ್ಪಟ ಸಾಂಸಾರಿಕ ಚಾನೆಲ್ ಎಂಬ ಹೆಸರು ಪಡೆದಿದ್ದ ಈ-ಟಿವಿಯಲ್ಲಿ ಲಾಲನೆಯರ ತೊಡೆ ಪ್ರದರ್ಶಿಸುವ ತೆಲುಗು ಮೂಲದ ವಾವ್ ನಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ ಆದರೂ ವೀಕ್ಷಕರಿಗೆ ಅದರಲ್ಲೂ ಕುಟುಂಬ ಸಮೇತರಾಗಿ ವೀಕ್ಷಣೆ ಮಾಡಲು ಅಪಥ್ಯವಾಗಿವೆ. ಆದರೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಯಾವುದೇ ಆಡಂಬರವಿಲ್ಲದೆ ದೇವರ ಮುಂದೆ ಶಾಂತವಾಗಿ ಬೆಳಗುವ ನೀಲಾಂಜನದಂತೆ ದಶಕದ ನಂತರ ಇಂದಿಗೂ ನಡೆದುಕೊಂಡು ಬರುತ್ತಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ.
ಈ ಟಿವಿ ಸುದ್ದಿ ವಿಭಾಗದಲ್ಲಿ ಬರೆದರೆ ಮುಗಿಯದಷ್ಟು ಇದೆ. ಒಂದು ಕಾಲದಲ್ಲಿ ಈ ಟಿವಿ ಸುದ್ದಿಗಳು ಸ್ಪಷ್ಟತೆಗೆ ಹೆಸರಾಗಿದ್ದುವು. ಇಂದು ಉಳಿದ ಚಾನೆಲ್ಲೂಗಳೊಂದಿಗೆ ಸ್ಪರ್ಧೆಗೆ ಇಳಿದು ಅದು ಅವನತಿಯತ್ತ ಹೆಜ್ಜೆ ಹಾಕುತ್ತಿದೆ. ಸುದ್ದಿ ಹೇಗೆ ಮತ್ತು ಎಲ್ಲಿ ಕೊಡಬೇಕು. ಹೆಡ್ ಲೈನ್ ಗಳನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಗೊಂದಲಗಳು ಸುದ್ದಿ ವಿಭಾಗದವರಿಗಿದೆ. ಇದಕ್ಕೆ ಬಹುಷ ಸುದ್ದಿ ವಿಭಾಗದ ಮುಖ್ಯಸ್ಥರೆಂದು ಹೇಳಿ ಕೊಳ್ಳುವ ಜಗದೀಶ್ ಮಣಿಯಾಣಿ ಕಾರಣರಂತೆ. ಅವಿಧ್ಯಾವಂತ ಮತ್ತು ಅವಿವೇಕಿಯಾದ ಈತ ಜಗಳಗಂಟಿ ಮತ್ತು ಅತ್ಯಂತ ಕೊಳಕು ಮುಖ ಮತ್ತು ಕೊಳಕು ಮನಸ್ಸಿನ ಮನುಷ್ಯನಂತೆ.!ಏಲ್ಲೋ ಕೆಲಸವಿಲ್ಲದೆ ಕೊಳಚೆಯಲ್ಲಿ ಈತನನ್ನು ಜಿ.ಎನ್. ಮೋಹನ್ ತಂದು ಕೂರಿಸಿದ ಮೇಲೆ ಅದೇಷ್ಟೋ ಒಳ್ಳೆಯರು ಚಾನೆಲ್ ಬಿಟ್ಟು ಹೊರ ನಡೆದರು.ಇನ್ನೊಂದು ದುರಂತ ಎಂದರೆ ಈತ ಕೆಲಸ ಮಾಡಲು ಹೋದ ಸಂಸ್ಥೆಗಳು ಬಾಗಿಲು ಮುಚ್ಚ್ಚುತ್ತಿದ್ದಾವಂತೆ, ಉದಾ: ಹೊಸಸಂಜೆ,ಜನವಾಹಿನಿ,ಕೆನರಾ ಟೈಂಮ್ಸ್,ಮುಂತಾದುವು. ಈ ಟಿವಿ ಗೂ ಆಗತಿ ಬಾರದಿರಲಿ ಎಂಬುದೇ ನಮ್ಮೆಲ್ಲರ ಹಾರೈಕೆ. ಒಂದು ಕಾಲದಲ್ಲಿ ಸುದ್ದಿ ಮಾದ್ಯಮಾದ ಘಟಾನುಘಟಿಗಳಾದ ಕೆ.ಎಂ.ಮಂಜುನಾಥ್ ,ಜಿ.ಎನ್. ಮೋಹನ್ ರಂತಾಹ ಪತ್ರಕರ್ತರು ಕಟ್ಟಿ ಬೆಳೆಸಿದ ಈ ಟಿವಿ ನ್ಯೂಸ್ ಜಗದೀಶನಂತಹ ಅವಿದ್ಯಾವಂತ ಮತ್ತು ಸುದ್ದಿಗಳ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದವನ ಕೈಗೆ ಕೊಟ್ಟ ಪರಿಣಾಮ ಹಳ್ಳ ಹಿಡಿಯುತ್ತಿರುವುದು ಬಹುಷ ದುರಂತವೇ ಸರಿ. ಈ ಕುರಿತು ಈ-ಟಿವಿ ಆಡಳಿತ ಮಂಡಳಿ ಶೀಘ್ರದಲ್ಲೇ ಗಮನ ಹರಿಸುವುದು ಒಳ್ಳೆಯದು .ಇವನ ಕರ್ಮ ಕಾಂಡ, ಹೈದ್ರಾಬಾದಿನ ಸೆಕ್ಸ್ ಪುರಾಣ ಇನ್ನೂ ಇದೆ.ಮುಂದಿನ ದಿನಗಳಲ್ಲಿ ಧಾರವಾಹಿ ರೂಪದಲ್ಲಿ ಬರೆಯುವಷ್ಟಿದೆ. ಮುಂದೆ ನಿರೀಕ್ಷಿಸಿ.